Wednesday, April 24, 2024
spot_imgspot_img
spot_imgspot_img

ವಿಟ್ಲ: ಕಾರು ಪಾರ್ಕಿಂಗ್ ಮಾಡಿದ ಕಾರಣ ಅಷ್ಟು ಜಾಗಕ್ಕೆ ಡಾಂಬರು ಹಾಕಲೇ ಇಲ್ಲ..! ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಮುಖ್ಯ ರಸ್ತೆಯಲ್ಲಿ ಡಾಮರೀಕರಣ ನಡೆಯುತ್ತಿದ್ದು, ಈ ಸಂದರ್ಭ ಕಾರೊಂದು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿರುವುದರಿಂದ ಅಷ್ಟು ಜಾಗವನ್ನು ಬಿಟ್ಟು ಡಾಮರೀಕರಣ ಕಾಮಗಾರಿ ಮುಂದುವರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಟ್ಲದ ಶಾಲಾ ರಸ್ತೆಯಿಂದ ಮೇಗಿನಪೇಟೆ ವರೆಗೆ ರಸ್ತೆ ಡಾಮರೀಕರಣ ನಡೆಯುತ್ತಿದೆ. ವಿಟ್ಲದ ಎಲಿಮೆಂಟರಿ ಶಾಲೆಯ ಮುಂಭಾಗ ಕಾರೊಂದು ಪಾರ್ಕಿಂಗ್ ಮಾಡಿದ್ದರಿಂದ ಆ ಸ್ಥಳದಲ್ಲಿ ಡಾಮರೀಕರಣ ಮಾಡಲು ಸಾಧ್ಯವಾಗಿಲ್ಲ.

ಇದರಿಂದ ಕಾರು ನಿಂತಿದ್ದ ಸ್ಥಳವನ್ನು ಬಿಟ್ಟು ಅದರ ಹೊರ ಭಾಗದಲ್ಲಿ ಡಾಮರೀಕರಣ ಮಾಡಿದ್ದು, ಇದರ ಫೋಟೋ ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!