ಕೊನೆಯ ಕ್ಷಣದ ಈ ನಿರ್ಧಾರದಲ್ಲಿ ಹಿಂದಿನ ಆಡಳಿತ ವರ್ಗದವರ ಹಸ್ತಕ್ಷೇಪ ಇದೆ: ಸಾರ್ವಜನಿಕರಿಂದ ಆರೋಪ
ಕೋರ್ಟ್ ಆದೇಶ ನೀಡಿರುವ ಬಗ್ಗೆ ಮಾಹಿತಿ ಇದೆ ಆದರೆ ಅಧಿಕೃತ ಆದೇಶ ನಮ್ಮ ಕೈ ಸೇರಿಲ್ಲ: ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ


ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ನಾಳೆ ನಡೆಯಲಿದ್ದು, ಕೊನೆಯ ಕ್ಷಣದಲ್ಲಿ ಸುಮಾರು 300 ಸದಸ್ಯರ ಮತದಾರರ ಎರಡನೇ ಪಟ್ಟಿ ಕೋರ್ಟ್ ಆದೇಶದ ಅನ್ವಯ 300 ಮತದಾರರಿಗೆ ಹಕ್ಕು ಚಲಾವಣೆಯ ಅಧಿಕೃತ ಆದೇಶ ತರಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆ 1200 ಮತಗಳು ಅಧಿಕೃತವಾಗಿದ್ದು, ಇದೀಗ ಹೊಸದಾಗಿ 300 ಜನರ ಸೇರ್ಪಡೆಯಾಗಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಒಟ್ಟು 41 ಜನ ಸ್ಪರ್ಧಿಗಳಿದ್ದು, ಕೊನೆಯ ಕ್ಷಣದ ಬದಲಾವಣೆ ಗೊಂದಲಗಳಲ್ಲಿ ಈ ಹಿಂದಿನ ಆಡಳಿತ ವರ್ಗದವರ ಹಸ್ತಕ್ಷೇಪ ಇದೆಯೆಂದು ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವಿಟ್ಲ ಪಡ್ನೂರು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ’ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ 300 ಮತದಾರರಿಗೆ ಹಕ್ಕು ಚಲಾವಣೆಯ ಅಧಿಕೃತ ಆದೇಶವನ್ನು ಕೋರ್ಟ್ ನೀಡಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಇನ್ನೂ ಅಧಿಕೃತ ಆದೇಶ ನಮ್ಮ ಕೈ ಸೇರಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.