Friday, May 17, 2024
spot_imgspot_img
spot_imgspot_img

ವಿಟ್ಲ: ಕುತೂಹಲದತ್ತ ವೀರಕಂಭ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಚುನಾವಣೆ

- Advertisement -G L Acharya panikkar
- Advertisement -

ವಿಟ್ಲ: ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿಯ ಎರಡೂವರೆ ವರ್ಷ ಪೂರ್ಣಗೊಂಡಿದ್ದು ಎರಡನೇ ಅವಧಿಯ ಮಿಸಲಾತಿ ಪ್ರಕಟಗೊಂಡಿದೆ.

ವೀರಕಂಭ ಗ್ರಾಮ ಪಂಚಾಯತ್ 14 ಸ್ಥಾನ ಹೊಂದಿದ್ದು ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 7 ಸ್ಥಾನ ಗಳನ್ನು ಪಡೆಯುವ ಮೂಲಕ ಸಮಬಲ ಸಾಧಿಸಿತ್ತು. ಕಳೆದ ಅವಧಿಯಲ್ಲಿ ತೀವ್ರವಾದ ಕಸರತ್ತು ಮತ್ತು ನಾಟಕೀಯ ವಿದ್ಯಮಾನಗಳು ನಡೆದು ಬಿಜೆಪಿ ಅಧ್ಯಕ್ಷ ಸ್ಥಾನ ಅಲಂಕರಿಸಿತ್ತು. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು.

ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಮೂರು ಬಾರಿ ಸದಸ್ಯರಾಗಿರುವ ಜಯಂತಿ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನಿಂದ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಶೀಲಾ ನಿರ್ಮಲ ವೇಗಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ “ಎ ” ಮೀಸಲಾತಿ ಹೊಂದಿದ್ದು ಬಿಜೆಪಿಯಿಂದ ಇಬ್ಬರು ಮತ್ತು ಕಾಂಗ್ರೆಸ್ ನ ಮೂವರು ಸದಸ್ಯರಿಗೆ ಸ್ಪರ್ದಿಸುವ ಅರ್ಹತೆ ಹೊಂದಿದ್ದಾರೆ .ಬಹುತೇಕವಾಗಿ ಸಮಬಲಗೊಳ್ಳುವ ಸಾಧ್ಯತೆ ಇದ್ದು, ಸಮಬಲಗೊಂಡಲ್ಲಿ ಲಾಟರಿ ಎತ್ತುವ ಮೂಲಕ ಅಯ್ಕೆ ನಡೆಯಲಿದೆ ಕೊನೆಯ ಕ್ಷಣದಲ್ಲಿ ಅಚ್ಚರಿಯ ವಿದ್ಯಮಾನಗಳು ನಡೆಯುವ ಸಾದ್ಯತೆಗಳು ಇದೆ ಒಟ್ಟಿನಲ್ಲಿ ಕುತೂಹಲದತ್ತ ಸಾಗಿದೆ.

- Advertisement -

Related news

error: Content is protected !!