ವಿಟ್ಲ: ಅಳಿಕೆ ಗ್ರಾಮದ ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದಕ್ಕೆ ಸುಮಾರು 38 ವರ್ಷಗಳ ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ, ಸೇವೆಗಳನ್ನು ಸಮಾಜಕ್ಕೆ ಕೊಟ್ಟ ಅನುಭವ. ಗೌರವಾಧ್ಯಕ್ಷ ಮೋಹನದಾಸ.ರೈ ಯವರ ನೇತೃತ್ವದಲ್ಲಿ ಅ.15ರಂದು ಸಂಘದ ಸಭೆ ನಡೆದು ಮುಂದಿನ ಎರಡು ವರ್ಷಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ರಾಧಾಕೃಷ್ಣ ಕುಲಾಲ್ ಎರುಂಬು, ಉಪಾಧ್ಯಕ್ಷರಾಗಿ ರಾಜೇಶ್ ಎಂ.ಎಸ್, ಕಾರ್ಯದರ್ಶಿಗಳಾಗಿ ಸುರೇಶ್ ವೈ. ಯಸ್, ಜತೆ ಕಾರ್ಯದರ್ಶಿಗಳಾಗಿ ಆದರ್ಶ ಬಲ್ಲಾಳ್, ಕ್ರೀಡಾಕಾರ್ಯದರ್ಶಿಗಳಾಗಿ ರಂಜಿತ್ ಕುಲಾಲ್ ಹಾಗೂ ಸಂತೋಷ್ ಕುಂದರ್, ಕೋಶಾಧಿಕಾರಿಗಳಾಗಿ ಜಯಪ್ರಕಾಶ್ ಆಚಾರ್ಯ ಹಾಗೂ ನವಿನ್ ಕುಲಾಲ್ ಮೂಡಾಯಿಬೆಟ್ಟು, ವಿಶೇಷ ಸಲಹೆಗಾರರಾಗಿ ಬಾಲಕೃಷ್ಣ ಕಾರಂತ, ಸಂಜೀವ ಶೆಟ್ಟಿ ಸಿ. ಯಚ್, ಮದುಸೂದನ್ ರೈ, ವಸಂತ ಎರುಂಬು, ಚಂದ್ರಶೇಖರ ಆಚಾರ್ಯ, ರಮೇಶ್ ಬಂಗೇರ, ಪ್ರದೀಪ್ ಬಲ್ಲಾಳ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಶಂಕರ್ ಬಲ್ಲಾಳ್, ವರದರಾಜ್, ಲೋಹಿತ್ ಕುಮಾರ್, ರವೀಂದ್ರ ಶೆಟ್ಟಿ, ಕೇಶವ ಕುಲಾಲ್, ಸಚಿನ್ ಕುಮಾರ್, ಮನೋಜ್ ಕುಲಾಲ್, ಶಿವರಾಜ್ ಕುಲಾಲ್, ಅನೀಶ್ ಸಾಲ್ಯಾನ್, ದಿವ್ಯರಾಜ್ ರೈ, ಉದಯ ಕುಲಾಲ್ ಅಲ್ಲದೆ ಸಂಘದ ಏಳ್ಗೆಗೆಗೆ ಶ್ರಮಿಸಿದವರೆಲ್ಲರನ್ನು ಖಾಯಂ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಮಿತ್ರ ವೃಂದವು ಸಾಮಾಜಿಕ ಸಹಕಾರ, ಆರೋಗ್ಯ ಸಹಾಯ, ವಾರ್ಷಿಕ ಕ್ರೀಡಾಕೂಟ, ಶ್ರಮದಾನಗಳ ವಾರ್ಷಿಕ ಯೋಜನೆಯನ್ನು ಹಾಕಿಕೊಂಡಿದೆ. ಸಭೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆಗಳನ್ನು ನವೀನ, ಜಯಪ್ರಕಾಶ್ ನಡೆಸಿಕೊಟ್ಟರು.