Sunday, May 19, 2024
spot_imgspot_img
spot_imgspot_img

ವಿಟ್ಲ: (ಫೆ:19-20) ಶ್ರೀ ಭಗವತೀ ದೇವಸ್ಥಾನ ಪುನಃ ಪ್ರತಿಷ್ಟಾಪನೆಯ 27 ನೇ ವಾರ್ಷಿಕ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಭಗವತೀ ದೇವಸ್ಥಾನ ವಿಟ್ಲ ಪುನಃ ಪ್ರತಿಷ್ಟಾಪನೆಯ 27 ನೇ ವಾರ್ಷಿಕ ಮಹೋತ್ಸವವು ಫೆ:19 ಮತ್ತು 20 ರಂದು ಶ್ರೀ ಭಗವತೀ ದೇವಸ್ಥಾನ ವಿಟ್ಲ ಇಲ್ಲಿ ನಡೆಯಲಿದೆ.

ದಿನಾಂಕ: 19-2-2024 ನೇ ಸೋಮವಾರ ಸಂಜೆ 7 ರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಆರ್‍.ಕೆ. ಆಟ್ಸ್ ಚಿಣ್ಣರಮನೆ (ರಿ.) ವಿಟ್ಲ ಇವರಿಂದ ನೃತ್ಯ ಸಂಭ್ರಮ ನಡೆದು ಬಳಿಕ ರಾತ್ರಿ 8:30 ಕ್ಕೆ ಶ್ರೀ ಭಗವತೀ ಸನ್ನಿಧಿಯಲ್ಲಿ ಸ್ವರ್ಣಾಲಂಕಾರ ಪೂಜೆ ನಡೆಯಲಿದೆ.

ದಿನಾಂಕ: ಪೂರ್ವಾಹ್ನ ಗಂಟೆ 9:00 ರಿಂದ ಗಣಹೋಮ, ಪೂರ್ವಾಹ್ನ ಗಂಟೆ 11:00 ರಿಂದ ಶ್ರೀ ವಾಸುಕಿ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಪೂಜೆ ನಡೆದು ಬಳಿಕ ಮಧ್ಯಾಹ್ನ ಗಂಟೆ 12:00 ಕ್ಕೆ ಶ್ರೀ ಅಣ್ಣಪ್ಪ ದೈವದ ಸನ್ನಿಧಿಯಲ್ಲಿ ಪೂಜೆ ನಡೆಯಲಿದೆ. ಮಧ್ಯಾಹ್ನ 12:30 ಕ್ಕೆ ಶ್ರೀ ಭಗವತೀ ಸನ್ನಿಧಿಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ , ಮಧ್ಯಾಹ್ನ1:00 ರಿಂದ ಅನ್ನದಾನ ನಡೆದು ಬಳಿಕ ಸಂಜೆ 6:00 ರಿಂದ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ಕಾಳಮಿತಿ ತುಳು ಯಕ್ಷಗಾನ ಬಯಲಾಟ ’ಕಂಚಿಲ್ದ ಪರಕೆ’ ಎಂಬ ತುಳು ಕಥಾಭಾಗವನ್ನು ಆಡಿತೋರಿಸಲಿದ್ದಾರೆ. ಬಳಿಕ ರಾತ್ರಿ 8:00 ರಿಂದ ಶ್ರೀ ಭಗವತೀ ದೇವರ ಉತ್ಸವ, ದರ್ಶನ ಬಲಿ, ಬಟ್ಲು ಕಾಣಿಕೆ , ಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!