ವಿಟ್ಲ: ಜೆಸಿಐ ವಿಟ್ಲ ವತಿಯಿಂದ ಜೆಸಿಐ ಸಪ್ತಾಹ 2024ರ ಕೊನೆ ದಿನ ಗ್ರೇಟ್ ಡೇ ಸೆಲೆಬ್ರೇಶನ್ ಮತ್ತು ಡೈಮಂಡ್ ಜುಬಿಲೀ ಸೆಲೆಬ್ರೇಶನ್, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜೆಸಿ. ಪೂರ್ವ ಅಧ್ಯಕ್ಷರು, ರೋಟರಿ ಜಿಲ್ಲೆ 3181,ವಲಯ 4ರ ಅಸಿಸ್ಟೆಂಟ್ ಗವರ್ನರ್ ರೋ. ಜಯರಾಮ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜೆಸಿ ಪೂರ್ವ ಅಧ್ಯಕ್ಷರು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರು ಲ. ಪ್ರಭಾಕರ್ ಶೆಟ್ಟಿ ದಂಬೆಕಾನ ಹಾಗೂ ಜೆಸಿ ಪೂರ್ವ ಅಧ್ಯಕ್ಷರು, ಬಂಟ್ವಾಳ ತಾಲೂಕು ಜಮೀಯತ್ ಫಲಹಾ ಅಧ್ಯಕ್ಷರು, ಹಾಗೂ ಎಮ್ ಫ್ರೆಂಡ್ಸ್ ಸ್ಥಾಪಕ ಅಧ್ಯಕ್ಷರು ಜೆಸಿ. ರಶೀದ್ ವಿಟ್ಲ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಜೆಸಿ. ಸಂತೋಷ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂವರು ಹಿರಿಯ ಮಹಿಳಾ ಸೇವಕಿಯಾರಾದ ಭವಾನಿ ಟೀಚರ್ ಕೊಲ್ಯ, ಶ್ರೀಧರ್ ಪ್ರತಿಭಾ ಶೆಟ್ಟಿ ದೇವರಗುಂಡಿ ಪುಣಚ, ಲಯನ್. ಪುಷ್ಪಲತಾ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಜೊತೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಿಮ್ಮಪ್ಪ ನಾಯ್ಕ್ ಇವರನ್ನು ಜೆಸಿಐ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.ಜೆಸಿಐ ಇಂಡಿಯಾ 75ರ ಸಂಭ್ರಮವನ್ನು ಎಲ್ಲಾ ಪೂರ್ವ ಅಧ್ಯಕ್ಷರು ಸೇರಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ವೇದಿಕೆಯಲ್ಲಿ ಜೆಸಿ. ಪರಮೇಶ್ವರ್, ಜೆಸಿ. ಆರ್ಥಿಕ್, ಜೆಸಿ ಮುರಳಿ ಪ್ರಸಾದ್, ಜೆಸಿ ಸಿಂಧು ಶೆಟ್ಟಿ, ಜೆಜೆಸಿ ಸಾನ್ವಿ ಉಪಸ್ಥಿತರಿದ್ದರು.