




ವಿಟ್ಲ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್.ಡಿ.ಪಿ.ಐ ವಿಟ್ಲ ಪಟ್ಟಣ ಸಮಿತಿ ಹಾಗೂ ಮೇಗಿನಪೇಟೆ ಬೂತ್ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಕಛೇರಿ ಬಳಿ ಮೇಗಿನಪೇಟೆಯಲ್ಲಿ ನಡೆಯಿತು.
ಧ್ವಜಾರೋಹಣವನ್ನು ಶೆರೀಫ್ ಉಸ್ತಾದ್ ಅಲಾಡಿ ನೆರವೇರಿಸಿದರು. ಅಧ್ಯಕ್ಷರು ಎಸ್.ಡಿ.ಪಿ.ಐ ವಿಟ್ಲ ಪಟ್ಟಣ ಸಮಿತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಎಸ್.ಡಿ.ಪಿ.ಐ ದ.ಕ ಶಾಕಿರ್ ಅಳಿಕೆಮಜಲು ಪ್ರಾಸ್ತಾವಿಕ ಭಾಷಣ ನುಡಿದರು. ಸಮಾಜ ಸೇವಕ ಮುಸ್ತಫ ವಿಟ್ಲ ಸಂದೇಶ ಭಾಷಣ ನುಡಿದರು.
ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶಾಕಿರ ಅಬ್ದುಲ್ಲ, ಜೊತೆಕಾರ್ಯದರ್ಶಿ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಮುಸ್ತಫ ಡಿಬಿ, ಸದಸ್ಯರು ವಿ ಫೌಂಡೇಶನ್ ವಿಟ್ಲ ತೌಸಿಫ್ ಎಮ್.ಜಿ, ಉಧ್ಯಮಿಗಳು ವಿಟ್ಲ ಉಬೈದ್ ವಿಟ್ಲ ಬಝಾರ್, ಅಧ್ಯಕ್ಷ ಎಸ್.ಡಿ.ಪಿ.ಐ ಕಂಬಳಬೆಟ್ಟು ಬೂತ್ ಸಮಿತಿ ಇಸ್ಮಾಯಿಲ್ ಒಕ್ಕೆತ್ತೂರು, ಅಧ್ಯಕ್ಷ ಎಸ್.ಡಿ.ಪಿ.ಐ ಕಾನ್ತಡ್ಕ ಬೂತ್ ಸಮಿತಿ ಹಾರಿಸ್ ಕಾನ್ತಡ್ಕ, ಕಾರ್ಯದರ್ಶಿ ಎಸ್.ಡಿ.ಪಿ.ಐ ಮೇಗಿಪೇಟೆ ನಮೀರ್ ಹಳೆಮನೆ, ಜೊತೆ ಕಾರ್ಯದರ್ಶಿ ಎಸ್.ಡಿ.ಪಿ.ಐ ಮೇಗಿನಪೇಟೆ ಬೂತ್ ಸಮಿತಿ ಝಹೀರ್ ಪೊನ್ನೋಟ್ಟು, ಕೋಶಾಧಿಕಾರಿ ಎಸ್.ಡಿ.ಪಿ.ಐ ಮೇಗಿನಪೇಟೆ ಬೂತ್ ಸಮಿತಿ ಸಾಹಿಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.