Friday, June 19, 2026
spot_imgspot_img
spot_imgspot_img

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸುವ ಗೆಜ್ಜೆನಾದ ಸ್ಪರ್ಧೆಯ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ, ಕಾರ್ಯದರ್ಶಿಯಾಗಿ ಧನರಾಜ್ ಅಮೈ

ವಿಟ್ಲ: ಕಳೆದ ಎರಡು ವರ್ಷಗಳಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡವು ವಿನೂತನ ಶೈಲಿಯೊಂದಿಗೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ವಿಭಿನ್ನತೆಯನ್ನು ಸಾರಲು ಮುಂದಾಗಿದೆ.

ಹಲವಾರು ವೇದಿಕೆಗಳಲ್ಲಿ ನೃತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರದ ಸಾಂಸ್ಕೃತಿಕ ವೈಭವಗಳನ್ನು ಪ್ರದರ್ಶಿಸಿ, ತನ್ನದೇ ವಿಶೇಷ ಶೈಲಿಯೊಂದಿಗೆ ಜನಮನ್ನಣೆ ಪಡೆದ ಕಲಾ ತಪಸ್ವಿ ತಂಡವು ಇದೀಗ ಹೊಸ ಸ್ಪರ್ಧೆಯೊಂದಿಗೆ ತಮ್ಮಮುಂದೆ ನಿಂತಿದೆ.

ಕುಣಿಯುವ ಮನಸ್ಸುಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಗೆಜ್ಜೆನಾದ-2025 ಎನ್ನುವ ಹೆಸರಿನಲ್ಲಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜ. 26 ನೇ ಆದಿತ್ಯವಾರ, ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಈ ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಯನ್ನು ವೈಭವದಿಂದ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿದ್ದು, ಸ್ಪರ್ಧೆಯ ಸಂಚಾಲಕರಾಗಿ ಕಲಾತಪಸ್ವಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ಅಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ, ಕಾರ್ಯದರ್ಶಿಯಾಗಿ ಧನರಾಜ್ ಅಮೈ ಆಯ್ಕೆಯಾಗಿರುತ್ತಾರೆ. ಉಳಿದಂತೆ ಮೂವತ್ತಕ್ಕಿಂತ ಹೆಚ್ಚು ಸದಸ್ಯರು ಈ ಸಮಿತಿಯಲ್ಲಿದ್ದಾರೆ.

- Advertisement -

Related news

error: Content is protected !!