Saturday, May 4, 2024
spot_imgspot_img
spot_imgspot_img

ದಕ್ಷಿಣ ಕನ್ನಡ: ವೀಕೆಂಡ್ ಕರ್ಫ್ಯೂ – ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಲಭ್ಯ

- Advertisement -G L Acharya panikkar
- Advertisement -

ಕೊರೋನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಅಧಿಕೃತ ಮಾರ್ಗಸೂಚಿ ಹೊರಡಿಸಿದ್ದು ಇಂದು ರಾತ್ರಿಯಿಂದ ಆಗಸ್ಟ್ 16ರ ತನಕ ಮಾರ್ಗಸೂಚಿ ಜಾರಿಯಲ್ಲಿರಲಿದೆ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜ ನಗರ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಉಳಿದಂತೆ ರಾಜ್ಯದೆಲ್ಲೆಡೆ ನೈಟ್ ಕರ್ಫ್ಯೂ ಇಂದಿನಿಂದಲೇ ಜಾರಿಯಲ್ಲಿರಲಿದೆ.

ಯಾವೆಲ್ಲ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶವಿದೆ?

ಸರ್ಕಾರಿ ಕಚೇರಿ, 24 ಗಂಟೆ ಕಾರ್ಯಾಚರಿಸುವ ಕೈಗಾರಿಕೆಗೆ ಅನುಮತಿ.

ಬೆಳಗ್ಗೆ 5ರಿಂದ ಮಧ್ಯಾಹ್ನ 2ರ ತನಕ ಅಗತ್ಯ ವಸ್ತು ಪಡೆಯಲು ಅವಕಾಶ. (ಹಾಲು, ದಿನಸಿ, ಮೀನು, ಮಾಂಸ, ಹಣ್ಣು-ಹಂಪಲು ಮಾರಾಟಕ್ಕೆ ಅನುಮತಿ)

ಮದ್ಯ ಮಾರಾಟ – ಪಾರ್ಸೆಲ್ ಮಾತ್ರ ಅವಕಾಶ (ಬೆಳಗ್ಗೆ 5ರಿಂದ ಮಧ್ಯಾಹ್ನ 2)

ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್, ಹೋಂ ಡೆಲಿವರಿಗೆ ಅವಕಾಶ

ವಿಮಾನ ನಿಲ್ದಾಣ, ರೈಲ್ವೇ ಪ್ರಯಾಣಕ್ಕೆ ಅನುಮತಿ – ಪ್ರಯಾಣದ ಟಿಕೆಟ್ ಕಡ್ಡಾಯ

ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭ ನಿಷೇಧ

ಮದುವೆಗೆ ಅವಕಾಶ- 100 ಜನರೊಂದಿಗೆ ನಡೆಸಲು ಅವಕಾಶ

ಅಂತಿಮ ಸಂಸ್ಕಾರಕ್ಕೆ 20 ಜನರಿಗೆ ಅವಕಾಶ

ಇನ್ನುಳಿದಂತೆ ಬೇರೆಲ್ಲಾ ವ್ಯವಹಾರಗಳಿಗೆ ಅನುಮತಿ ಇರುವುದಿಲ್ಲ.

- Advertisement -

Related news

error: Content is protected !!