Sunday, June 7, 2026
spot_imgspot_img
spot_imgspot_img

ವಿಟ್ಲ: ಯುವತಿಯ ನಗ್ನ ಫೋಟೋ ತೆಗೆದು ಅತ್ಯಾಚಾರ ಪ್ರಕರಣ – ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು

- Advertisement -
- Advertisement -

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಯುವತಿಯ ಮೇಲೆ ಆಕೆಯ ಅಕ್ಕನ ಗಂಡನಿಂದಲೇ ಅತ್ಯಾಚಾರ ಪ್ರಕರಣ. ಇದೀಗ ಪುಣಚ ನಿವಾಸಿಯಾಗಿರುವ ಆರೋಪಿ ಬಶೀರ್ ನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದು ಆರೋಪಿ ಬಶೀರ್ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದೆ. ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿನ ಯುವತಿಯನ್ನು ಆಕೆಯ ಅಕ್ಕನ ಗಂಡ ಆರೋಪಿ ಬಶೀರ ಎಂಬಾತನು ಯುವತಿಯನ್ನು ಆಕೆಯ ಇಚ್ಚೆಗೆ ವಿರುದ್ಧವಾಗಿ ಆಕೆಯನ್ನು ಅತ್ಯಾಚಾರವೆಸಗಿದ್ದ.

ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ನಗ್ನ ಪೋಟೋಗಳನ್ನು ಆತನ ಮೋಬೈಲ್‌ನಲ್ಲಿ ಸೆರೆ ಹಿಡಿದು ನೀನು ನನ್ನೊಂದಿಗೆ ಲೈಂಗಿಕ ಕ್ರಿಯೆ ಮಾಡಲು ಸಿಗದೇ ಇದ್ದರೆ ನನ್ನ ಮೊಬೈಲ್‌ನಲ್ಲಿರುವ ನಿನ್ನ ಪೋಟೋಗಳನ್ನು ವೈರಲ್‌ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಪ್ರಕರಣ ವಿಟ್ಲ ಠಾಣೆಯಲ್ಲಿ ಆರೋಪಿಯ ವಿರುದ್ಧ ಯುವತಿಯು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!