Tuesday, July 21, 2026
spot_imgspot_img
spot_imgspot_img

ವಿಟ್ಲದಲ್ಲಿ ಧಾರಾಕಾರ ಮಳೆ- ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ

- Advertisement -
- Advertisement -

ವಿಟ್ಲ: ವಿಟ್ಲ ಮುಖ್ಯ ಪೇಟೆಯಲ್ಲಿ ಮಧ್ಯಾಹ್ನವೇ ಧಾರಾಕಾರ ಮಳೆ ಸುರಿದಿದೆ. ಸುಮಾರು 15 ನಿಮಿಷಗಳ ಕಾಲ ಭಾರೀ ಮಳೆ ಸುರಿದಿದೆ. ವಿಟ್ಲದ ಒಳ ಭಾಗಗಳಾದ ಬೊಬ್ಬೆಕೇರಿ, ಚಂದಳಿಕೆ, ಭಾಗದಲ್ಲಿ ಮಳೆಯಾಗದೇ ಪೇಟೆಯಲ್ಲಿ ಮಾತ್ರ ಮಳೆಯಾಗಿದೆ.

ಈ ಮಳೆಯಿಂದ ಪೇಟೆಯಲ್ಲಿ ಬಿಸಿಲಿನಿಂದ ಬೆಂದಿದ್ದ ಜನರಿಗೆ ತಂಪೆಸಗಿದೆ. ಹವಾಮಾನ ಇಲಾಖೆಯು ಈ ಮೊದಲೇ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯನ್ನು ಸೂಚನೆಯನ್ನು ಈ ಮೊದಲೇ, ವಾರಗಳ ಹಿಂದೆಯೇ ನೀಡಿತ್ತು. ಅದರಂತೆ ಇವತ್ತು ಮೇಲೆ ಬಿದ್ದಿದೆ.

ಬೆಳ್ತಂಗಡಿ ಪುತ್ತೂರು ಸುಳ್ಯ ಮುಂತಾದ ಕಡೆಗಳಲ್ಲಿಯೂ ಮೋಡಗಟ್ಟಿದ್ದು ಭಾರೀ ಮಳೆ ಬೀಳುವ ಲಕ್ಷಣವಿದೆ. ಮಳೆಯ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅಡಿಕೆ ಕೃಷಿಕರ ಮನೆಗಳಲ್ಲಿ ಅಡಿಕೆ ಪೂಜುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

- Advertisement -

Related news

error: Content is protected !!