Monday, April 29, 2024
spot_imgspot_img
spot_imgspot_img

ವಿಟ್ಲ: ವ್ಯಾಪಕವಾಗಿ ಹರಡುತ್ತಿರುವ ಸೋಂಕು; ಮನೆ ಬಾಗಿಲಿಗೆ ದಿನಸಿ ಸಾಮಗ್ರಿ ತಲುಪಿಸುವ ವ್ಯವಸ್ಥೆ ಕಲ್ಪಿಸಿದ ಮೆ ಜನಾರ್ದನ ಪೈ ದಿನಸಿ ಅಂಗಡಿ

- Advertisement -G L Acharya panikkar
- Advertisement -

ವಿಟ್ಲ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಈಗಾಗಲೇ ಲಾಕ್ ಡೌನ್ ವಿಧಿಸಿ ಜನರು ಮನೆಯಲ್ಲಿಯೇ ಇರುವಂತೆ ಮಾಡಿದೆ.

ವಿಟ್ಲ ಭಾಗದಲ್ಲಿ ವೇಗವಾಗಿ ಕೊರೊನಾ ಹರಡುತ್ತಿದೆ. ಪೊಲೀಸ್ ಇಲಾಖೆ ಮತ್ತು ವಿಟ್ಲ ಪಟ್ಟಣ ಪಂಚಾಯತ್ ವಿವಿಧ ಕ್ರಮಗಳನ್ನು ಜಾರಿಗೊಳಿಸಿದೆ. ಇನ್ನೂ ಮುಂದೆ ಅನಾಗತ್ಯವಾಗಿ ಜನರು ಪೇಟೆಗೆ ಬರುವುದನ್ನು ನಿರ್ಬಂಧಿಸಿದೆ.

ವಿಟ್ಲದ ಮೆ. ಜನಾರ್ದನ ಪೈ ದಿನಸಿ ಅಂಗಡಿಯವರು ಮನೆ ಬಾಗಿಲಿಗೆ ಅಗತ್ಯ ಸಾಮಾಗ್ರಿ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದೆ. ಅಗತ್ಯ ಸಾಮಗ್ರಿಗಾಗಿ ವಿಟ್ಲ ಪೇಟೆಗೆ ಬರುವಾಗ ಜನಸಂದಣಿ ಸೇರುವುದರಿಂದ ಕೊರೊನಾ ಸೋಂಕು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಸಾಮಗ್ರಿಗಳು ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ಇದರಿಂದ ಜನರು ಕೊರೊನಾ ಮಹಾಮಾರಿಯಿಂದ ತಪ್ಪಿಸಬಹುದು.‌

ಕಳೆದ ಲಾಕ್ ಡೌನ್ ಸಂದರ್ಭ ಉತ್ತಮ ದಿನಸಿ ಸಾಮಗ್ರಿಗಳನ್ನು ಕ್ಷಿಪ್ರಗತಿಯಲ್ಲಿ ಒದಗಿಸಿಕೊಡುವ ವಿಟ್ಲದ ಮೆ.ಜನಾರ್ದನ ಪೈ ವತಿಯಿಂದ ಜನರ ಮನೆ ಬಾಗಿಲಿಗೆ ಸಾಮಗ್ರಿ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಅದು ಯಶಸ್ವಿಗೊಂಡಿತ್ತು. ಆದರೆ ಈ ಬಾರಿಯ ಕೊರೊನಾ ಎರಡನೆ ಅಲೆ ಭಾರಿ ತೊಂದರೆ ಉಂಟು ಮಾಡುತ್ತಿದೆ. ಆದುದ್ದರಿಂದ ಈ ಬಾರಿಯೂ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ವಿಟ್ಲ ಸುತ್ತಮುತ್ತಲಿನ ಜನರು ಸ್ವಾಗತಿಸಿದ್ದಾರೆ.‌

ನಾಗರಿಕರು online, ವಾಟ್ಸಾಪ್ ಮೂಲಕ ಪಟ್ಟಿ ಕಳುಹಿಸಿದರೆ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು, ಮರುದಿನ ಸಾಮಗ್ರಿಗಳನ್ನು ಮನೆಗೆ ತಲುಪಿಸಲಾಗುತ್ತದೆ. +919448472207 / +919448455717 / for contacts 08255230207 / 08255265267.

ಗೂಗಲ್ ಪ್ಲೈ ಸ್ಟೋರ್ ನಲ್ಲಿ PJP Angadi ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆನ್ಲೈನ್ ಶಾಪಿಂಗ್ ಕೂಡಾ ಮಾಡುವ ಮೂಲಕ ಇದರ ಸದುಪಯೋಗಪಡೆದುಕೊಳ್ಳಬಹುದು ಎಂದು ಮೆ. ಜನಾರ್ದನ ಪೈ ಸಂಸ್ಥೆಯ ವ್ಯವಸ್ಥಾಪಕರಾದ ಪಿ. ರಾಧಾಕೃಷ್ಣ ಪೈ ಅವರು ತಿಳಿಸಿದ್ದಾರೆ.

driving
- Advertisement -

Related news

error: Content is protected !!