Monday, July 27, 2026
spot_imgspot_img
spot_imgspot_img

ವಿಟ್ಲ: ಭಾರತದ ಪ್ರತಿಷ್ಠಿತ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನೂತನ ಕಚೇರಿ ಉದ್ಘಾಟನೆ

- Advertisement -
- Advertisement -

450 ಕ್ಕಿಂತಲೂ ಅಧಿಕ ಉತ್ಪನ್ನಗಳೊಂದಿಗೆ ಸುಮಾರು 16 ವಿಭಾಗಳಲ್ಲಿ ದೇಶ-ಹೊರದೇಶಗಳಲ್ಲಿ ಬ್ಯುಸ್‌ನೆಸ್‌ ಕ್ಷೇತ್ರದಲ್ಲಿ ಸಾಧನೆ ಗೈದ ಕಂಪೆನಿ

ವಿಟ್ಲ: ಭಾರತದ ಪ್ರತಿಷ್ಠಿತ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನೂತನ ಕಚೇರಿ ವಿಟ್ಲ ಮುಖ್ಯ ಪೇಟೆಯ ಹೀರಾ ಟವರ್‍ಸ್‌ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.

ನೂತನ ಕಚೇರಿಯಲ್ಲಿ ಬೆಳಗ್ಗೆ ಗಣಹೋಮ ನಡೆಯಿತು. ಬಳಿಕ ಡಾ. ಗೀತಾ ಪ್ರಕಾಶ್‌ ವೈದ್ಯಾಧಿಕಾರಿ ಸುರಕ್ಷಾ ಹೆಲ್ತ್‌ ಸೆಂಟರ್‌ ವಿಟ್ಲ, ಕಮಲಾಕ್ಷ ಸುವರ್ಣ ಯು.ಸಿ.ಡಿ ಹಾಗೂ ರಾಮ್‌ದಾಸ್‌ ಶೆಟ್ಟಿ ವಿಟ್ಲ, ಮ್ಯಾನೇಜಿಂಗ್‌ ಡೈರೆಕ್ಟರ್‌ ವಿಟಿವಿ ವಿಟ್ಲ ಇವರು ರಿಬ್ಬನ್‌ ಕತ್ತರಿಸಿ, ದೀಪ ಬೆಳಗಿಸಿ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ನೂತನ ಕಚೇರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ಟಾರ್‌ ಡೈರೆಕ್ಟರ್‌ ಶ್ರೀಮತಿ ದಿವ್ಯಾ ಉದಯ್‌ಕುಮಾರ್‌ ಸೇರಿದಂತೆ ಎಲ್ಲಾ ಬ್ಯುಸ್‌ನೆಸ್‌ ಪಾಲುದಾರರು ನೂತನ ಕಚೇರಿಯನ್ನು ಉದ್ಘಾಟಿಸಿದ ಡಾ. ಗೀತಾ ಪ್ರಕಾಶ್‌ ಹಾಗೂ ರಾಮ್‌ದಾಸ್‌ ಶೆಟ್ಟಿ ವಿಟ್ಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಇದರಿಂದ ಸದುಪಯೋಗ ಪಡೆದುಕೊಂಡ ಗ್ರಾಹಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕೇವಲ ಹತ್ತು ಉತ್ಪನ್ನಗಳ ಮಾರಾಟದೊಂದಿಗೆ ಗೌತಮ್‌ ಬಾಲಿ ಎಂಬವರ ಮಾಲಿಕತ್ವದಲ್ಲಿ ಪ್ರಾರಂಭಗೊಂಡ ಈ ಕಂಪೆನಿ ಇದೀಗ ಸುಮಾರು 450 ಕ್ಕಿಂತಲೂ ಅಧಿಕ ಉತ್ಪನ್ನಗಳೊಂದಿಗೆ ಸುಮಾರು 16 ವಿಭಾಗಳಲ್ಲಿ ದೇಶ-ಹೊರದೇಶಗಳಲ್ಲಿ ಬ್ಯುಸ್‌ನೆಸ್‌ ಕ್ಷೇತ್ರದಲ್ಲಿ ತನ್ನದೇ ಸಾಧನೆಯ ಮೂಲಕ ಭಾರತದ ಪ್ರತಿಷ್ಠಿತ ಕಂಪೆನಿಯಾಗಿ ಜನಪ್ರಿಯವಾಗಿದೆ. ಹಲವಾರು ಅವಾರ್ಡ್‌‌ಗಳನ್ನು ಪಡೆದುಕೊಂಡ ಈ ಕಂಪೆನಿ ಹಲವು ಉತ್ತಮ ಗುಣಮಟ್ಟದ ಪ್ರೊಡಕ್ಟ್‌ಗಳನ್ನು ಡೈರೆಕ್ಟ್ ಸೆಲ್ಲಿಂಗ್ ಮುಖಾಂತರ ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತಾ ಬಂದಿದೆ. ಕ್ಷೇಮದ ಮೂಲಕ ಸಂಪತ್ತನ್ನು ಹರಡುವ ಧ್ಯೇಯ ವಾಕ್ಯದೊಂದಿಗೆ ಪ್ರಪಂಚದ 8 ರಾಷ್ಟ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹರಡಿದೆ.

ಇದೀಗ ಭಾರತದ ಕಂಪೆನಿಯ ಪ್ರೋಡಕ್ಟ್‌ಗಳು ವಿಟ್ಲದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹೆಲ್ತ್ ಕೇರ್‌, ಪರ್ಸನಲ್‌ ಕೇರ್‍, ಎಗ್ರಿ ಪ್ರೊಡಕ್ಟ್‌, ಕಾಸ್‌ಮೆಟಿಕ್‌ ಹೀಗೆ ಹಲವು ಇನ್ನಿತರ ಉತ್ತಮ ಗುಣಮಟ್ಟದ ಉತ್ಪನ್ನಗಳು ನಿಮಗೆ ಬೇಕೆ..? ಹಾಗಾದ್ರೆ ಇಂದೇ ಭೇಟಿ ನೀಡಿ

ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಚೇರಿ
ಮೂರನೇ ಮಹಡಿ ಹೀರಾ ಟವರ್‍ಸ್‌ ಬ್ಯುಲ್ಡಿಂಗ್‌,
ವಿಟ್ಲ ಮುಖ್ಯ ಪೇಟೆಯ ಖಾಸಗಿ ಬಸ್‌ ನಿಲ್ದಾಣ ಹತ್ತಿರ ವಿಟ್ಲ

- Advertisement -

Related news

error: Content is protected !!