Tuesday, July 21, 2026
spot_imgspot_img
spot_imgspot_img

ಜೇ.ಸಿ.ಐ. ವಿಟ್ಲ ಘಟಕದಿಂದ ‘ಭಾವೈಕ್ಯತಾ ದಿನಾಚರಣೆ’

- Advertisement -
- Advertisement -

ವಿಟ್ಲ: ಜೇ.ಸಿ.ಐ ವಿಟ್ಲ ಘಟಕದಿಂದ ವಿಟ್ಲ ಪರಿಸರದ ಶಾಲೆಗಳಲ್ಲಿ ‘ಭಾವೈಕ್ಯತಾ ದಿನಾಚರಣೆ’ ಕಾರ್ಯಕ್ರಮ ನೆರವೇರಿತು. ವಿಟ್ಲ ಜೆ.ಸಿ.ಐ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ವಿಠಲ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ದ ವಿದ್ಯಾರ್ಥಿಗಳಿಗೆ ಭಾವೈಕ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪೂರ್ವಾಧ್ಯಕ್ಷರುಗಳಾದ ಬಾಬು ಕೊಪ್ಪಳ,ರಮೇಶ್ ಬಿ.ಕೆ,ಅಣ್ಣಪ್ಪ ಸಾಸ್ತಾನ,ಜೈ ಕಿಶನ್, ಜೆ.ಸಿ.ಐ ವಿಟ್ಲದ ಕಾರ್ಯದರ್ಶಿ ಪರಮೇಶ್ವರ ಹೆಗಡೆ, ಜೆ.ಸಿ ಸದಸ್ಯರುಗಳಾದ ರಾಜಶೇಖರ್, ವಿಶ್ವನಾಥ ರಾಥೋಡ್, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಮಹಾಬಲೇಶ್ವರ ಭಟ್ ಹಾಗೂ ಎಲ್ಲ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಕೊಳ್ನಾಡು ಗ್ರಾಮದ ಸರಕಾರಿ ಪ್ರೌಢಶಾಲೆ ಕಾಡುಮಠ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆ.ಸಿ.ಐ ವಲಯ15 ರ ವಲಯಾಡಳಿತಕಾರಿ ಜೈಕಿಶನ್ ರವರು ವಿದ್ಯಾರ್ಥಿಗಳಿಗೆ ಭಾವೈಕ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ತಾರೇಶ್ ನಾಯ್ಕ ‘ಪ್ರಾಮಾಣಿಕತೆ ಮಳಿಗೆ ಉದ್ಘಾಟಿಸಿ’ ಶುಭಹಾರೈಸಿದರು. ಜೆ.ಸಿ.ಐ ವಿಟ್ಲದ ಕಾರ್ಯದರ್ಶಿ ಪರಮೇಶ್ವರ ಹೆಗಡೆ ,ಸದಸ್ಯರಾದ ರಾಜೀವ್ ಹಾಗೂ ಪ್ರೌಢಶಾಲೆಯ ಶಿಕ್ಷಕವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ‘ಪ್ರಾಮಾಣಿಕತೆ ಮಳಿಗೆ’ಯಲ್ಲಿ ವ್ಯಾಪಾರ ನಡೆಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

- Advertisement -

Related news

error: Content is protected !!