Thursday, June 18, 2026
spot_imgspot_img
spot_imgspot_img

ವಿಟ್ಲ: ದಲಿತ ಬಾಲಕಿಯೊಂದಿಗೆ ಅನ್ಯಕೋಮಿನ ಯುವಕನ ಅಸಭ್ಯ ವರ್ತನೆ; ಪ್ಯಾಂಟ್ ಜಾರಿಸಿದ ವಿಕೃತ ಕಾಮಿಯ ವಿರುದ್ಧ ಫೋಕ್ಸೋ ಕಾಯ್ದೆಯಡಿಯಲ್ಲಿ ಕೇಸು ದಾಖಲು

- Advertisement -
- Advertisement -

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡು ಎಂಬಲ್ಲಿ ಬಾಲಕಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ತನ್ನ ಕುಟುಂಬದ ಕೃಷಿ ಜಮೀನಿಗೆ ನೆರೆಮನೆಯ ನಜೀರ್ ಎಂಬವರ ಮನೆಯ ಆಡುಗಳು ಬಂದಿದ್ದನ್ನು ಓಡಿಸಿದ ಬಾಲಕಿಯೊಂದಿಗೆ ನಜೀರ್ ಎಂಬಾತ ಅಸಭ್ಯವಾಗಿ ವರ್ತಿಸಿದ್ದಾನೆ.

ಕೃಷಿಯನ್ನು ಹಾಳು ಮಾಡುತ್ತಿರುವ ಆಡುಗಳನ್ನು ಓಡಿಸಿ ಪ್ರಶ್ನಿಸಿದ ಬಾಲಕಿಗೆ ನಜೀರ್ ಹಾಗೂ ಆತನ ಅಕ್ಕ, ಬಾವ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾರೆ. ನಂತರ ಆರೋಪಿ ನಜೀರ್ ಪ್ಯಾಂಟ್ ಜಾರಿಸಿ ವಿಡಿಯೋ ಮಾಡು ಎಂದು ಅಸಭ್ಯವಾಗಿ ಬಾಲಕಿಯ ಜೊತೆ ವರ್ತಿಸಿದ್ದಾನೆ.

ಈ ಸಂಬ0ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ, ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುತ್ತಾಳೆ.

- Advertisement -

Related news

error: Content is protected !!