Saturday, June 20, 2026
spot_imgspot_img
spot_imgspot_img

ವಿಟ್ಲ: ಕಡಂಬು ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

- Advertisement -
- Advertisement -

ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಡಂಬು ಇಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಊರಿನ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ವಾರ್ಷಿಕೋತ್ಸವವು ಡಿ.30 ರಂದು ನಡೆಯಿತು.

ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ನಾಯ್ಕ.ಬಿ, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಬಿ.ಎಂ ಹಸೈನಾರ್‍ ಕಾರ್ಯಕ್ರಮ ಉದ್ಘಾಟಿಸಿದರು. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರೇಮಲತ, ಗ್ರಾಮ ಪಂಚಾಯತ್ ಸದಸ್ಯರಾದ ನೆಬಿಸ, ಲಕ್ಷ್ಮೀ, ಮಹಮ್ಮದ್, ಅಮಿತ, ಸಂದೇಶ್ ಶೆಟ್ಟಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ವಿಟ್ಲ ಕ್ಲಸ್ಟರ್‌ನ ಸಿ.ಆರ್‍.ಪಿ ಬಿಂದು ಬಿ.ಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶಾಲಾ ಹಳೆ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ಕುಸ್ತಿಪಟು ಸನ ಸುಲ್ತಾನ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ನಾಯ್ಕ.ಬಿ ಸ್ವಾಗತಿಸಿ, ಸಹ ಶಿಕ್ಷಕಿಯರಾದ ಶೋಭಲತ ಎಮ್ ಮತ್ತು ರಶ್ಮಿ ಎಂ.ವಿ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಅತಿಥಿ ಶಿಕ್ಷಕಿಯರಾದ ಶ್ವೇತಾ ಕುಮಾರಿ.ಜಿ ವಂದಿಸಿದರು ಸುಮಿತ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!