- Advertisement -
- Advertisement -


ವಿಟ್ಲ: ಕುಲಾಲ ಸಂಘ ವಿಟ್ಲ (ರಿ.) ಇದರ ಸಭಾ ಭವನದ ನಿರ್ಮಾಣದ ಬಗ್ಗೆ ಕುಲಾಲ ಬಾಂಧವರ ಸಹಕಾರಕ್ಕೆ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

2023ರಲ್ಲಿ ಸಂಘದ ಬೆಳ್ಳಿ ಹಬ್ಬದ ಆಚರಣೆಯ ಶುಭಾವಸರದಲ್ಲಿ ಸಭಾಭವನದ ಪೂರ್ಣತೆಯ ಗುರಿಯನ್ನಿರಿಸಿಕೊಂಡು ಸಹಕಾರವನ್ನು ಯಾಚಿಸಲಾಗಿದೆ. ವಿಟ್ಲ ಫಿರ್ಕಾಕ್ಕೆ ಸೇರಿದ ಎಲ್ಲಾ ಗ್ರಾಮಗಳ ಸರ್ವ ಸದಸ್ಯರ ಸಹಕಾರಕ್ಕೆ ಗ್ರಾಮ ಸಮಿತಿ ರಚಿಸಲು ಕುಲಾಲ ಸಮಾಜದ ಸರ್ವರೂ ಸಹಕರಿಸುವಂತೆ ಅಧ್ಯಕ್ಷ ಬಾಬು ಬಿ. ಕೆ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ವಿನಂತಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರ ರಮಾನಾಥ್ ವಿಟ್ಲ, ಗೌರವಾಧ್ಯಕ್ಷ ವೀರಪ್ಪ ಮೂಲ್ಯ, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -