- Advertisement -
- Advertisement -
ವಿಟ್ಲ: ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ಎಸೈ ರಾಜೇಶ್ ನೇತೃತ್ವದಲ್ಲಿ ವಿಟ್ಲ ಪೊಲೀಸರ ತಂಡ ನಾಕಾಬಂದಿ ಅಳವಡಿಸಿದ್ದು, ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡ ಭಾನುವಾರ ಲಾಕ್ ಡೌನ್ ತೀರ್ಮಾನ ವಿಟ್ಲದಲ್ಲಿ ಯಶಸ್ವಿಗೊಂಡಿದ್ದು, ಮೆಡಿಕಲ್, ದಿನಸಿ ಅಂಗಡಿ ಸಹಿತ ಎಲ್ಲವೂ ಬಂದ್ ಆಗಿದ್ದು, ವಿಟ್ಲ ಪೊಲೀಸರು ವಿಟ್ಲದ ಅಲ್ಲಲ್ಲಿ ನಾಕಾಬಂದಿ ಅಳವಡಿಸಿದ್ದಾರೆ., ಅನಗತ್ಯವಾಗಿ ಪೇಟೆಗೆ ಬರುವ ವಾಹನ ಹಾಗೂ ಜನರ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ವಿಟ್ಲದ ಹೃದಯ ಭಾಗವಾಗಿರುವ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಪೊಲೀಸರು ಅನಗತ್ಯವಾಗಿ ಓಡಾಡುವ ಜನರ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ರೀತಿ ವಿಟ್ಲದ ಮೇಗಿನಪೇಟೆ, ಒಕ್ಕೆತ್ತೂರು, ಮಾಣಿ, ಕಂಬಳಬೆಟ್ಟು, ಸಾಲೆತ್ತೂರು, ಮಂಗಳಪದವು ಮೊದಲಾದ ಕಡೆಗಳಲ್ಲಿ ರೌಂಡ್ಸ್ ನಲ್ಲಿದ್ದಾರೆ.



- Advertisement -