Wednesday, May 1, 2024
spot_imgspot_img
spot_imgspot_img

ಹಮಾಸ್‌ ಉಗ್ರರನ್ನು ಬೆಂಬಲಿಸಿ ಸ್ಟೇಟಸ್‌ ಹಾಕಿದ್ದ ಯುವಕ ವಶಕ್ಕೆ

- Advertisement -G L Acharya panikkar
- Advertisement -
vtv vitla

ಹಮಾಸ್‌ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್‌ ಹಾಕಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವಿಜಯನಗರದ ಹೊಸಪೇಟೆಯಲ್ಲಿ ನಡೆದಿದೆ.

ಆಲಂ ಬಾಷಾ (20) ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತ ಹಮಾಸ್ ಉಗ್ರರನ್ನು ಬೆಂಬಲಿಸಿ ವಾಟ್ಸಪ್‌ ಸ್ಟೇಟಸ್ ಹಾಕಿದ್ದ. ಅಷ್ಟೇ ಅಲ್ಲದೇ ಸ್ಟೇಟಸ್‌ನಲ್ಲಿ ನಾನು ಪ್ಯಾಲೆಸ್ತೀನ್ ಪರವಾಗಿದ್ದೇನೆ, ಪ್ಯಾಲೆಸ್ತೀನ್ ಜಿಂದಾಬಾದ್ ಎಂದು ಬರೆದುಕೊಂಡಿದ್ದ.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಲ್ಲಿ ಭಾರತ ಇಸ್ರೇಲ್‍ನ್ನು ಬೆಂಬಲಿಸಿದೆ. ಇದರಿಂದ ಯುವಕನ ಪೋಸ್ಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಹೊಸಪೇಟೆ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಲಂ ಬಾಷಾನನ್ನು ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನ ಸಂಬಂಧಿ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!