- Advertisement -





- Advertisement -
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ, ಯುವ ರೆಡ್ ಕ್ರಾಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ, ವಿಟ್ಠಲ ಸುಪ್ರಜಿತ್ ಐಟಿಐ ವಿಟ್ಲ, ಸರಕಾರಿ ಐಟಿಐ ವಿಟ್ಲ, HDFC ಬ್ಯಾಂಕ್ ಮಂಗಳೂರು ಮತ್ತು ಪುತ್ತೂರು ಹಾಗೂ KMC ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಜಿಲ್ಲಾ ಮಾಜಿ ಗವರ್ನರ್ ಡಾ. ಗೀತಪ್ರಕಾಶ್ ಕಾರ್ಯವನ್ನು ಉದ್ಘಾಟಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪದ್ಮನಾಭ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್ ಶೆಟ್ಟಿ, ಡಾ. ಪ್ರತ್ಯುಷ್, ಚಂದ್ರಹಾಸ ಪಿ., ಅಶ್ರಫ್ ವಿ ಕೆ ಯಂ, ಅಬ್ದುಲ್ ಕರೀಂ, ಮೋನಪ್ಪ ಗೌಡ, ಜಲಜಾಕ್ಷಿ ಬಾಲಕೃಷ್ಣ, ಪುಷ್ಪಲತಾ, ರಮೇಶ್ ರೈ, ಹರೀಶ್ ಕೋಟ್ಯಾನ್, ಶಶಿಕಲಾ ಉಪಸ್ಥಿತರಿದ್ದರು.
ಶಶಿಕಲಾ ಸ್ವಾಗತಿಸಿದರು. ND ನಾಗರಾಜ್ ವಂದಿಸಿ, ಸೌಮ್ಯ ಕಾರ್‍ಯಕ್ರಮ ನಿರೂಪಿಸಿದರು. 65ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
- Advertisement -