Sunday, May 19, 2024
spot_imgspot_img
spot_imgspot_img

ವಿಟ್ಲ : ಕೊಡಂಗಾಯಿ ಸುನ್ನೀ ಸೆಂಟರಿನಲ್ಲಿ ನಡೆದ ಮೀಲಾದ್ ಪೆಸ್ಟ್ -23 ಕಾರ್ಯಕ್ರಮ; ಮಧ್ಯರಾತ್ರಿ ಜೀವ ರಕ್ಷಣೆಗಾಗಿ ಸಾಹಸ ಮೆರೆದ ಗ್ರಾಮದ ಯುವಕರಿಗೆ ಸನ್ಮಾನ

- Advertisement -G L Acharya panikkar
- Advertisement -
vtv vitla

ವಿಟ್ಲ: ಕೊಡಂಗಾಯಿ ಸುನ್ನಿ ಸೆಂಟರಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಎಸ್ ಬಿ ಎಸ್ ಸಂಯುಕ್ತ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಸಲವು ವಿಶ್ವಜ್ಯೋತಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಜನನದಿಂದ ಪುನೀತವಾದ ಪವಿತ್ರ ರಬೀಉಲ್ ಅವ್ವಲ್ ತಿಂಗಳಲ್ಲಿ ವಿಶ್ವ ಪ್ರವಾದಿ ಜನ್ಮದಿನಾಚರಣೆ ಈದ್ ಮೀಲಾದ್ ಪ್ರಯುಕ್ತ ನಡೆದ ಮೌಲಿದ್ ಮಜ್ಲಿಸ್ ಹಾಗೂ ಅಲ್ – ಮದ್ರಸತುಲ್ ಖಳ್’ರಿಯಾ ವಿದ್ಯಾರ್ಥಿಗಳ ಕಲಾ ಕಾರ್ಯಕ್ರಮ ಮೀಲಾದ್ ಪೆಸ್ಟ್ -23 ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಧ್ಯರಾತ್ರಿ ಜೀವ ಉಳಿಸಲು ಯಶಸ್ವಿ ಕಾರ್ಯಾಚರಣೆಯ ಮೂಲಕ ಸಾಹಸ ಮೆರೆದೆ ಗ್ರಾಮದ ಯುವಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಸುನ್ನೀ ಸಂಘ ಕುಟುಂಬದ ವತಿಯಿಂದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪುನಗರ ಮುದರ್ರಿಸ್ ಸಯ್ಯದ್ ಶಮೀಮ್ ತಂಙಳ್ ನೇತೃತ್ವದಲ್ಲಿ ಶಾಲು ಹೂದಿಸಿ ಸನ್ಮಾನ ಫಲಕವನ್ನು ನೀಡಿ ಸಾಹಸ ಯುವಕರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರು ಮದ್ರಸ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಮಧ್ಯರಾತ್ರಿ ಯಶಸ್ವಿ ಕಾರ್ಯಚರಣೆಯ ಮೂಲಕ ಜೀವ ರಕ್ಷಣೆಗಾಗಿ ಸಾಹಸ ಮೆರೆದ ಯುವಕರ ಸ್ಟೋರಿ👇

ಮಂಕುಡೆ ನಿವಾಸಿ ಪಾಕ ತಜ್ಞ ಹರ್ಷವರ್ಧನ್ ಭಟ್‌ರವರ ಬೈಕ್ ಕೊಡಂಗಾಯಿ ಸೇತುವೆಗೆ ಡಿಕ್ಕಿಹೊಡೆದು 40ರಷ್ಟು ಅಡಿ ಆಳದ ಹೊಳೆಗೆ ಬಿದ್ದು, ಒದ್ದಾಡುತಾ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಬೊಬ್ಬೆಕೇರಿ ನಿವಾಸಿಗಳಾದ ಮುಹಮ್ಮದ್ ರಾಶಿದ್ ಮತ್ತು ಅಬ್ದುಲ್ ರಝಾಕ್ ಈದ್ ಮೀಲಾದ್ ಪ್ರಯುಕ್ತ ಲೈಟಿಂಗ್ ವ್ಯವಸ್ಥೆಗೆ ಹೋಗಿ ಮರಳಿ ಬರುತ್ತಿರುವಾಗ ಕೊಡಂಗಾಯಿ ಸೇತುವೆ ಬಳಿ ಹೆಡ್ ಲೈಟ್ ಆನ್ ಆಗಿ ಬೈಕೊಂದು ಅನಾಥವಾಗಿ ಅಪಾಯವನ್ನು ತಿಳಿಸುತ್ತಿತ್ತು. ಇದನ್ನು ಗಮನಿಸಿದ ಇವರಿಗೆ ಸಹಾಯ ಯಾತನೆ ಮಾಡುತ್ತಾ ವ್ಯಕ್ತಿಯೊಬ್ಬರ ಅಳಲು ಕೇಳಿಬಂದಿತ್ತು. ಅರ್ಧರಾತ್ರಿಯ ಸಮಯವಾದುದರಿಂದ ಒಬ್ಬಂಟಿಯಾಗಿ ತೆರಳಲು ಧೈರ್ಯ ಬರದ ಕಾರಣ ತಕ್ಷಣ ಕೊಡಂಗಾಯಿ ಸೇತುವೆ ಪಕ್ಕದ ನಿವಾಸಿ ರಿಕ್ಷಾ ಚಾಲಕನಾದ ಪುತ್ತು ಯಾನೆ ಹಸೈನಾರ್ ಸಹಾಯಕ್ಕೆ ಕರೆದರು.

ಅಬ್ದುಲ್ ರಝಾಕ್ ರವರು ತನ್ನ ದ್ವಿಚಕ್ರದಿಂದ ಕೆಳಗಿಳಿದು ಪರಿಸರದ ಕಡೆಗೆ ಗಮನ ಕೊಟ್ಟಾಗ ಸಹಾಯ ಯಾತನೆ ಮಾಡುತ್ತಾ ವ್ಯಕ್ತಿಯೊಬ್ಬರ ಅಳಲು ಕೇಳಿಬರುತ್ತಿತ್ತು. ಅರ್ಧರಾತ್ರಿಯ ಸಮಯವಾದುದರಿಂದ ಒಬ್ಬಂಟಿಯಾಗಿ ತೆರಳಲು ಧೈರ್ಯ ಬರದ ಕಾರಣ ಕೊಡಂಗಾಯಿ ಸೇತುವೆ ಪಕ್ಕದ ನಿವಾಸಿ ರಿಕ್ಷಾ ಚಾಲಕನಾದ ಪುತ್ತು ಯಾನೆ ಹಸೈನಾರ್ ಸಹಾಯಕ್ಕೆ ಕರೆದರು. ಹಸೈನಾರ್ ಅವರು ತಕ್ಷಣವೇ ಎಸ್ ವೈ ಎಸ್ ಸಾಂತ್ವನ ವಿಭಾಗದ ಕಾರ್ಯಕರ್ತ ಅಬ್ದುಲ್ಲಾ ಕುಂಞ ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತ ಸಿಮಾಕ್ ಹಾಗೂ ಟಿ ಎಂ ಅಬೂಬಕರ್ ಅವರಿಗೆ ಕರೆ ಮಾಡಿ ಆಪತ್ಬಾಂಧವರ ರೂಪದಲ್ಲಿ ಜೊತೆಯಲ್ಲಿ ಸೇರಿ ಹರ್ಷವರ್ಧನ್ ರವರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಉಪಚರಿಸಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಗಾಢ ನಿದ್ರೆಯಿಂದ ಎಚ್ಚೆತ್ತು ಮತ್ತೊಬ್ಬರ ಜೀವ ಉಳಿಸಲು ಸಾಹಸಿಕ ಕಾರ್ಯಾಚರಣೆಗಿಳಿದ ಊರಿನ ಕಾರ್ಯಕರ್ತರ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದು, ಮಾನವೀಯತೆ ಇನ್ನೂ ಜೀವಂತವಾಗಿ ಉಳಿದಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ

- Advertisement -

Related news

error: Content is protected !!