Sunday, June 29, 2025
spot_imgspot_img
spot_imgspot_img

ವಿಟ್ಲ: ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಹೈನುಗಾರರಿಗೆ ಲೀಟರ್‌ಗೆ 1 ರೂ. ಪ್ರೋತ್ಸಾಹ ಧನ

- Advertisement -
- Advertisement -

ವಿಟ್ಲ: ವಿಟ್ಲ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಹಾಲು ಹಾಕುವ ಹೈನುಗಾರ ಸದಸ್ಯರಿಗೆ ಮೇ, ಜೂನ್ ಮತ್ತು ಜುಲೈ ತಿಂಗಳ ಪ್ರತೀ ಲೀಟರಿಗೆ 1 ರೂ. ಹೆಚ್ಚು ಪ್ರೋತ್ಸಾಹಧನ ನೀಡಲು ತೀರ್ಮಾನಿಸಿದೆ.

ಮೂರು ತಿಂಗಳ ಕಾಲ ಹೈನುಗಾರ ಸದಸ್ಯರಿಂದ ಸುಮಾರು 20 ಸಾವಿರ ಲೀಟರ್ ಹಾಲು ಸಂಘಕ್ಕೆ ಮಾರಾಟವಾಗುವ ಅಂದಾಜಿದ್ದು 60 ಸಾವಿರ ರೂ. ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಲಾಗುತ್ತದೆ. ಅಲ್ಲದೇ ಸಿಬ್ಬಂದಿಗಳಿಗೂ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು.

ಮೂರು ತಿಂಗಳ ಕಾಲ ಸಂಘದ ವತಿಯಿಂದ ಹೈನುಗಾರ ಸದಸ್ಯರಿಗೆ ಹೆಚ್ಚುವರಿ ಮೊತ್ತ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಟ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ಹೈನುಗಾರ ಸದಸ್ಯರಿಗೆ ಕಳೆದ ವರ್ಷವೂ ಇದೇ ರೀತಿ ಪ್ರೋತ್ಸಾಹ ಧನ ನೀಡಲಾಗಿದೆ. ಅಲ್ಲದೇ ಕಳೆದ ವರ್ಷ ಲಾಭಾಂಶವನ್ನು ಪ್ರತ್ಯೇಕವಾಗಿ ವಿತರಿಸಲಾಗಿತ್ತು. ವರ್ಷವೂ ಲಾಭಾಂಶವನ್ನು ಮತ್ತೆ ವಿತರಿಸಲಾಗುವುದು. ಇದು ಸಂಘದ ಸದಸ್ಯರನ್ನು ಬೆಂಬಲಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ತೆಗೆದುಕೊಂಡ ತೀರ್ಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!