Saturday, April 27, 2024
spot_imgspot_img
spot_imgspot_img

ವಿಟ್ಲ: 10:30 ಗಂಟೆಯಾದ್ರೂ ತೆರೆಯದ ನಾಡಕಛೇರಿ; ಸಾರ್ವಜನಿಕರಿಂದ ತರಾಟೆ!

- Advertisement -G L Acharya panikkar
- Advertisement -

ವಿಟ್ಲದ ನಾಡಕಛೇರಿ ಇಂದು 10:30 ಗಂಟೆಯಾದ್ರೂ ತೆರೆದಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡ ಘಟನೆ ನಡೆದಿದೆ. ಹತ್ತಿಪ್ಪತ್ತು ಜನರು ಸುಮಾರು 1 ಗಂಟೆಗೂ ಅಧಿಕ ಕಾದು ಕುಳಿತ ದೃಶ್ಯ ಕಂಡುಬಂದಿದೆ. ಯಾಕಿಷ್ಟು ತಡ ಎಂದು ಸ್ಥಳೀಯ ಅಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಕಛೇರಿ ತೆರೆಯದ ಹಿನ್ನಲೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೆಸ್.. ಇಲ್ಲಿ ಪಹಣಿ, ಆಧಾರ್, ಜಾತಿ, ಆದಾಯ ಹೀಗೆ ಅನೇಕ ಸಾರ್ವಜನಿಕ ಸೇವೆಗಳು ಲಭ್ಯವಿದೆ. ಇದಕ್ಕಾಗಿ ದಿನನಿತ್ಯ ನೂರಾರು ಜನರು ಬರುತ್ತಾರೆ. ಇಂದಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರ ಮಾತು ಇಷ್ಟಾದರೆ ಇಲ್ಲಿನ ಸಮಸ್ಯೆ ಮತ್ತೊಂದೇ ಇದೆ. ಇದೇ ಮೊದಲ ಬಾರಿಗೆ ಈ ರೀತಿ ಕಚೇರಿ ತಡವಾಗಿ ತೆರೆದಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ.

“ನಾಡಕಛೇರಿ 9:30 ಗಂಟೆಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರನ್ನು ಕಾಯಿಸುವ ಸ್ಥಿತಿ ಬರಬಾರದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳಬೇಕೆಂದು” ಎಂದಿದ್ದಾರೆ ಯತೀಶ್ ಕುಂಡಡ್ಕ

ನಾಡಕಛೇರಿಯ ಆಪರೇಟರ್ ಬೆಂಗಳೂರಿಗೆ ತರಬೇತಿಗೆ ತೆರಳಿದ ಹಿನ್ನಲೆ ಮತ್ತು ಮತ್ತೊಬ್ಬರು ಸಿಬ್ಬಂದಿ ಬಾರದ ಹಿನ್ನಲೆ ಈ ರೀತಿಯಾಗಿದೆ. ಅಷ್ಟು ಮಾತ್ರವಲ್ಲದೆ ವಿಟ್ಲ ನಾಡಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಅನ್ನೋದು ಇಲ್ಲಿನ ಸಿಬ್ಬಂದಿಗಳ ಮಾತು. ಇದರ ಕುರಿತು ಸಾಕಷ್ಟು ಬಾರಿ ಮೇಲಾಧಿಕಾರಿಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ ಅಲ್ಲಿ ಕೇಸ್ ವರ್ಕರ್ ಸ್ಟಾಫ್. ಒಟ್ಟಿನಲ್ಲಿ ಜನಸಂಪರ್ಕ ಈ ನೆಮ್ಮದಿ ಕೇಂದ್ರದಲ್ಲಿ ಇಂತಹ ಸ್ಥಿತಿ ಮುಂದೆ ಬಾರದ ರೀತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

- Advertisement -

Related news

error: Content is protected !!