Thursday, May 16, 2024
spot_imgspot_img
spot_imgspot_img

ಬಿರುಸಿನಿಂದ ನಡೆಯುತ್ತಿದೆ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: 3 ಗಂಟೆಯ ವೇಳೆ ಶೇ.62.77% ಮತದಾನ

- Advertisement -G L Acharya panikkar
- Advertisement -
vtv vitla
vtv vitla
vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನ ಗಂಟೆ 3ರ ಸುಮಾರಿಗೆ 18 ವಾರ್ಡ್’ಗಳಲ್ಲಿ ಈವರೆಗೆ 62.77 ಮತದಾನ ನಡೆದಿದೆ. 42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎಸ್.ಡಿ.ಪಿ.ಐ. ಕೆಲ ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ.

18 ವಾರ್ಡ್ಗಳಿಗೆ 7 ಮತದಾನ ಕೇಂದ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿ0ದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇಗಿನಪೇಟೆ ಶಾಲೆ, ಬೊಬ್ಬೆಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದರಿ ಶಾಲೆ ವಿಟ್ಲ, ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ ಪದವಿ ಪೂರ್ವ ಕಾಲೇಜು, ಒಕ್ಕೆತ್ತೂರು ಶಾಲೆ ನೆಲ್ಲಿಗುಡ್ಡೆ ಪ್ರೌಢ ಶಾಲೆಯಲ್ಲಿ ಮತದಾನ ನಡೆಯುತ್ತಿದೆ.

vtv vitla
vtv vitla
vtv vitla
- Advertisement -

Related news

error: Content is protected !!