ಡಿ. 31 & ಜ.1 ರಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ: ಅರುಣ್ ವಿಟ್ಲ
ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಡಿ. 31 ನೇ ಮಂಗಳವಾರ ಮತ್ತು ಜ.1 ನೇ ಬುಧವಾರ ನಡೆಯಲಿದ್ದು, ಈ ಬಗ್ಗೆ ವಿಟ್ಲ ಅಯ್ಯಪ್ಪ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರು ಅರುಣ್ ವಿಟ್ಲ ಮಾತನಾಡಿ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ. 31 ನೇ ಮಂಗಳವಾರ ಮತ್ತು ಜ.1 ನೇ ಬುಧವಾರದವರೆಗೆ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ. ಡಿ. 31 ನೇ ಮಂಗಳವಾರ ಬೆಳಗ್ಗೆ ಗಣಪತಿಹೋಮ, ನಾಗತಂಬಿಲ ನಂತರ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ರಂಗಪೂಜೆ, ದುರ್ಗಾಪೂಜೆ, ಉತ್ಸವ ಬಲಿ, ರಾತ್ರಿ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಜ.1 ನೇ ಬುಧವಾರ ಬೆಳಗ್ಗೆ ಶ್ರೀ ಭೂತಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಲಶ ಪೂರಣಿ, ನಂತರ ವಿಟ್ಲದ ಪ್ರಮುಖ ಬೀದಿಗಳಲ್ಲಿ ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ. ಸುರೇಶ್ ನೇತೃತ್ವದ ಕಲಾರಸಿಕ ಬೊಂಬೆ ಬಳಗ ವಿಟ್ಲ ಇವರಿಂದ ಕಲಾಸೇವೆ ಮತ್ತು ತತ್ವಮಸಿ ಸಿಂಗಾರಿ ಮೇಳ, ಪಂಜತೊಟ್ಟಿ ಕಾಸರಗೋಡು ಇವರಿಂದ ವಯಲಿನ್ ಸಹಿತ ಚೆಂಡೆವಾದನ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆಯೊಂದಿಗೆ ಶ್ರೀ ದೇವರ ಪೇಟೆ ಸವಾರಿ ಸಾಗಿಬರಲಿದೆ. ಶುದ್ಧ ಕಲಶಾಭಿಷೇಕ, ರಾತ್ರಿ ಪೂಜೆ, ಮಂತ್ರಾಕ್ಷತೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹಲವಾರು ವೈದಿಕ, ಧಾರ್ಮಿಕ ಕಾರ್ಯಕ್ರಮ ಸೇವೆಗಳು ನಡೆಸಿಕೊಂಡು ಬರಲಾಗಿದೆ. ಪ್ರತೀ ತಿಂಗಳ ಸಂಕ್ರಮಣದಂದು ಶ್ರೀ ದೇವರಿಗೆ ವಿಶೇಷ ಸೇವೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತಿದೆ ಹೆಚ್ಚಿನ ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಸ್ವಾಮಿ ಧರ್ಣಪ್ಪ ಗೌಡ, ಕಾರ್ಯದರ್ಶಿ ರವಿಚಂದ್ರ, ಕಾರ್ಯದರ್ಶಿ ಬಾಲಕೃಷ್ಣ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ರಾಘವ, ಪವನ್ ಮುದೂರು, ವೇಣುಗೋಪಾಲ್ ಉಪಸ್ಥಿತಿರಿದ್ದರು.