Saturday, May 18, 2024
spot_imgspot_img
spot_imgspot_img

ವಿಟ್ಲ: ಸಾರ್ವಜನಿಕವಾಗಿ ಗಿರಾಕಿಗಳಿಗೆ ಮದ್ಯ ಸೇವನೆಗೆ ಅವಕಾಶ; ಪೊಲೀಸರಿಂದ ದಾಳಿ, ಸೊತ್ತುಗಳು ವಶಕ್ಕೆ

- Advertisement -G L Acharya panikkar
- Advertisement -

ವಿಟ್ಲ: ವ್ಯಕ್ತಿಯೋರ್ವ ಮನೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಗಿರಾಕಿಗಳಿಗೆ ಅವಕಾಶ ಮಾಡಿಕೊಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶ ಪಡಿಸಿಕೊಂಡ ಘಟನೆ ಅಳಕೆ ಮಜಲಿನಲ್ಲಿ ನಡೆದಿದೆ.

ಕುಳ ಗ್ರಾಮದ ಅಳಕೆ ಮಜಲು ನಿವಾಸಿ ಶೇಖರ ಪೂಜಾರಿ (56) ಎಂಬಾತನೇ ಆರೋಪಿ.

ಈತ ಮದ್ಯದ ಸಾಚೆಟ್ ಗಳನ್ನು ಮಾರಾಟ ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕವಾಗಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದು, ಈ ಬಗ್ಗೆ ಬಂದ ಖಚಿತ ಮಾಹಿತಿ ಪ್ರಕಾರ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ವಿಸ್ಕಿ ಸಾಚೆಟ್ಗಳು, ಗಾಜಿನ ಲೋಟ ಹಾಗೂ ನೀರಿನ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ವಿಟ್ಲ ಠಾಣಾ ಪಿಎಸ್ಐ ಮಂಜುನಾಥ್, ಪಿ ಸಿ ಲೋಕೇಶ್, ಪಿ ಸಿ ಪ್ರತಾಪ್ ರೆಡ್ಡಿರವರು ಭಾಗವಹಿಸಿದ್ದರು.

- Advertisement -

Related news

error: Content is protected !!