Friday, May 17, 2024
spot_imgspot_img
spot_imgspot_img

ವಿಟ್ಲ : ಪೆರುವಾಯಿ ಯುವತಿಯ ಅತ್ಯಾಚಾರ ಪ್ರಕರಣ : ಆರೋಪಿ ನಮ್ಮ ಸಂಘಟನೆಗೆ ಸೇರಿದ ವ್ಯಕ್ತಿಯೇ ಅಲ್ಲ : ಮುರಳೀಕೃಷ್ಣ ಹಸಂತಡ್ಕ

- Advertisement -G L Acharya panikkar
- Advertisement -

ಪೆರುವಾಯಿಯ ಅತ್ಯಾಚಾರ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡಿಸುತ್ತದೆ . ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಪ್ರಾಣ ಮಾನದ ವಿಚಾರದಲ್ಲಿ ಅನ್ಯಾಯ ಆದಾಗ ನಮ್ಮ ಸಂಘಟನೆ ಯಾವತ್ತು ಅದರ ವಿರುದ್ದ ಹೋರಾಟ ಮಾಡುತ್ತದೆ ಎಂದು ಮುರಳೀಕೃಷ್ಣ ಹಸಂತಡ್ಕ ಸುದ್ದಿಗೋಷ್ಠಿಯಲ್ಲಿ ಹೇಳಿದರು .

ಅವರು ಪೆರುವಾಯಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ ಸಂದರ್ಭ ಉಡುಪಿಯ ವಿಚಾರ ಅಗಿರಬಹುದು ಸೌಜನ್ಯ ಪ್ರಕರಣ ಇರಬಹುದು ಹಿಂದೂ ಸಂಘಟನೆ ಪ್ರತಿಭಟನೆ ನಡೆಸಿ ಹಿಂದೂ ಸಮಾಜಕ್ಕೆ ನ್ಯಾಯವನ್ನು ಕೊಡುವಂತಹ ಕೆಲಸವನ್ನು ಮಾಡುತ್ತದೆ. ಆದರೆ ಪೆರುವಾಯಿಯ ಈ ಪ್ರಕರಣದಲ್ಲಿ ಅನೇಕ ವಿರೋಧಿ ಶಕ್ತಿಗಳೂ ಈ ವಿಚಾರವನ್ನು ಹಿಡಿದು ಕೊಂಡು ಯಾರೋ ಸಂಘಪರಿವಾರದ ಕಾರ್ಯಕರ್ತರು ಮಾಡಿದ್ದಾರೆ ಹೀಗಾಗಿ ಹಿಂದೂ ಸಂಘಟನೆ ಸುಮ್ಮನಿದೆ ಈ ರೀತಿ ಹೇಳುವ ಮೂಲಕ ನಾವು ಸುಬಗರು ಎಂದು ಹೇಳುತ್ತಿದ್ದಾರೆ.

ಪೆರುವಾಯಿಯ ಓರ್ವ ಸಹೋದರಿಯ ಅತ್ಯಾಚಾರ ಪ್ರಕರಣ ಆದಾಗ ವಿಟ್ಲ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಯಾರು ಆರೋಪಿಗಳಿದ್ದಾರೆ ಅವರ ಬಂಧನ ಆಗಿದೆ ಮತ್ತು ಅವರು ಯಾರು ನಮ್ಮ ಸಂಘಟನೆ ಗೆ ಸಂಬಂಧಿಸಿದ ವ್ಯಕ್ತಿಗಳಲ್ಲ ಅವರು ಯಾವುದೋ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿದ್ದಾರೆಂದು ಅವರನ್ನು ಬಜರಂಗದಳ ಮತ್ತೊಂದು ಸಂಘಟನೆ ಅಂತ ಹೇಳಲು ಸಾಧ್ಯನೆ ಇಲ್ಲ. ಯಾರೇ ಒಬ್ಬ ವ್ಯಕ್ತಿ ಒರ್ವ ಸಹೋದರಿಗೆ ತಾಯಿ ಗೆ ಅನ್ಯಾಯ ಮಾಡಿದರೆ ಅದನ್ನು ನಮ್ಮ ಸಂಘಟನೆ ಸಹಿಸಲ್ಲ. ಅದರಿಂದ್ದ ಕಳೆದ ಕೆಲ ದಿನಗಳಿಂದ ದ.ಕ ಜಿಲ್ಲೆ ಯಲ್ಲಿ ವಿರೋಧಿ ಶಕ್ತಿಗಳು ಎಸ್ಡಿಪಿಐ ಹಾಗೂ ಕಾಂಗ್ರೇಸ್ ಈ ಪೆರುವಾಯಿ ಪ್ರಕರಣವನ್ನು ಸಂಘಪರಿವಾರದವರು ಮಾಡಿದ್ದು ಅನ್ನುವ ವಿಚಾರವನ್ನು ನಮ್ಮ ತಲೆಗೆ ಕಟ್ಟುವಂತಹ ಪ್ರಯತ್ನ ಮಾಡಿರುವಂತಹದ್ದು ಅತ್ಯಂತ ಖಂಡನೀಯ ಮತ್ತು ಈ ಪ್ರಕರಣ ಯಾರೇ ಮಾಡಿದ್ದರು ಸಹ ಅವರಿಗೆ ಶಿಕ್ಷೆ ಆಗಬೇಕೆಂದು ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ .

- Advertisement -

Related news

error: Content is protected !!