Thursday, April 25, 2024
spot_imgspot_img
spot_imgspot_img

ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಬೆತ್ತಲೆ ಫೋಟೋ ಬಹಿರಂಗ ಪಡಿಸುವುದಾಗಿ ಬೆದರಿಕೆ- ಆರೋಪಿಗಳ ವಿರುದ್ಧ ಪ್ರಕರಣ ದಾಖಲು

- Advertisement -G L Acharya panikkar
- Advertisement -

ವಿಟ್ಲ: ಇಬ್ಬರು ಯುವಕರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಬೆತ್ತಲೆ ಫೋಟೋಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ ಘಟನೆ ಬೋಳಂತೂರು ಗ್ರಾಮದಲ್ಲಿ ನಡೆದಿದೆ.

ಬೋಳಂತೂರು ಗ್ರಾಮದ ಅಬೂಬಕ್ಕರ್‌ ಸಿದ್ದಿಕ್‌ ಹಾಗೂ ಚಪ್ಪಿ ಆರೋಪಿಗಳು. ಬೋಳಂತೂರು ಗ್ರಾಮದ ಮಹಿಳೆಯೊಬ್ಬರ ನಾದಿನಿ ಅಪ್ರಾಪ್ತ ಬಾಲಕಿ 2020 ಜನವರಿಯಲ್ಲಿ ಮನೆಯ ನರೆಮನೆಯ ಆರೋಪಿ ಅಬೂಬಕ್ಕರ್‌ ಸಿದ್ದಿಕ್‌ ಆತನ ಸ್ನೇಹಿತ ಚಪ್ಪಿ ಎಂಬವರು ಪೋನ್‌ ಮುಖಾಂತರ ಬಾಲಕಿಯಲ್ಲಿ ಸಲುಗೆಯಿಂದ ಮಾತನಾಡಿದ್ದಾರೆ.

ಬಳಿಕ 2020 ಜ.25 ರಂದು ರಾತ್ರಿ ಸಿದ್ದಿಕ್‌ ಪೋನ್‌ ಮಾಡಿ ನಿನ್ನೊಂದಿಗೆ ಮಾತನಾಡಲಿಕ್ಕಿದೆ ಮನೆಯ ಹೊರಗೆ ಬಾ ಎಂದು ತಿಳಿಸಿ ಮನೆಯ ಅಂಗಳಕ್ಕೆ ಬಾಲಕಿ ಬಂದಾಗ ಆಕೆಯನ್ನು ಪುಸಲಾಯಿಸಿ ಅಂಗಳದಲ್ಲಿಯೇ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಆತನ ಪೋನ್‌ಲ್ಲಿ ಬಾಲಕಿಯ ಬೆತ್ತಲೆ ಪೋಟೋಗಳನ್ನು ತೆಗೆದು, ಸಿದ್ದಿಕ್‌ನ ಸ್ನೇಹಿತ ಚಪ್ಪಿ ಕೂಡ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ತಮ್ಮ ಮೋಬೈಲ್‌ನಲ್ಲಿರುವ ಬೆತ್ತಲೆ ಪೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಹೆದರಿಸಿ ಬಳಿಕ ಇತ್ತೀಚೆಗೆ ಹಿಂದೆ ನಡೆದ ರೀತಿ ಲೈಂಗಿಕ ಕ್ರಿಯೆ ಮಾಡಲು ಬರುವಂತೆ ಆರೋಪಿತರು ಪದೇ ಪದೇ ಒತ್ತಾಯಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!