Saturday, April 27, 2024
spot_imgspot_img
spot_imgspot_img

ರಕ್ತಚಂದನ ಪತ್ತೆ-ವಿಟ್ಲ ಪೊಲೀಸರಿಂದ ಆರೋಪಿಯ ಬಂಧನ

- Advertisement -G L Acharya panikkar
- Advertisement -


ವಿಟ್ಲ: ವಿಟ್ಲ ಪೊಲೀಸರ ಭರ್ಜರಿ ಕಾರ್ಯಚರಣೆಯಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ರಕ್ತ ಚಂದನವನ್ನು ಆರೋಪಿ ಸಹಿತ ವಶಪಡಿಸಲಾಗಿದೆ. ಸುಮಾರು 12.100 ಕೆಜಿ ರಕ್ತಚಂದನವನ್ನು ಬಿಳಿ ಚೀಲದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ವಿಟ್ಲ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ವಶ ಪಡಿಸಿದ್ದಾರೆ.ಇದರ ಮೌಲ್ಯ 24200 ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಪುತ್ತೂರು ತಾಲೂಕಿನ ಚಾಪಳ್ಳ ನಿವಾಸಿ ಇಬ್ರಾಹಿಂರವರ ಪುತ್ರ ಅಬ್ಬು ಯಾನೆ ಉಮ್ಮರ್ ಫಾರೂಕ್(37) ಎಂಬಾತ ಸರಕಾರಿ ಬಸ್ ನಿಲ್ದಾಣದಲ್ಲಿ ಚೀಲದಲ್ಲಿ ರಕ್ತಚಂದನವನ್ನು ಕೊಂಡೊಯ್ಯುತ್ತಿದ್ದ ವೇಳೆ ವಿಟ್ಲ ಪೊಲೀಸರು ಎಸ್ ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತನಿಖೆಯ ವೇಳೆ ಆರೋಪಿಗೆ ಬೆಂಗಳೂರಿನಿಂದ ಸಯ್ಯದ್ ಎಂಬಾತನು ರಕ್ತಚಂದನ ಕೊಟ್ಟಿರುವುದಾಗಿ ತಿಳಿಸಿರುತ್ತಾನೆ.

ವಿಟ್ಲ ಠಾಣಾ ಎಸ್ ಐ ವಿನೋದ್ ರೆಡ್ಡಿ ಸಿಬ್ಬಂದಿಗಳಾದ ಪ್ರಸನ್ನ,ಜಯರಾಮ ಕೆ ಟಿ ,ಲೋಕೆಶ್ ,ವಿನಾಯಕ ಮತ್ತು ಪ್ರತಾಪ್ ರೆಡ್ಡಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

- Advertisement -

Related news

error: Content is protected !!