




ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 45ನೇ ವರ್ಷದ ಶ್ರೀ ಗಣೇಶೋತ್ಸವದ ಸಮಾರಂಭದ ಧಾರ್ಮಿಕ ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ ಕಾಯರ್ಕಟ್ಟೆ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ವಿಟ್ಲ ಶ್ರೀಮತ್ ಅನಂತೇಶ್ವರ ದೇವಸ್ಥಾನದ ವಿಟ್ಠಲ್ ಚಾತುರ್ಮಾಸ 2026ರ ಸಂಚಾಲಕರಾದ ಭವಾನಿಶಂಕರ್ ಕಂಡ್ಲೂರ್ ಮತ್ತು ಶಂಕರ ಭಟ್ ಪೂಗವನ ಬದನಾಜೆ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿ ಅಧ್ಯಕ್ಷ ಜಗದೀಶ್ ಪಾಣೆಮಜಲು ಸಭಾಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾರ್ಯಕರ್ತರಾದ ಜಗನ್ನಾಥ ಶೆಟ್ಟಿ ಕುಂಪಲ, ಎಸ್. ಕೊರಗಪ್ಪ ಗೌಡ ಸೇರಾಜೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ರಾಮದಾಸ್ ಶೆಣೈ ಪ್ರಸ್ತಾವಿಸಿ, ಸ್ವಾಗತಿಸಿದರು. ರಶ್ಮಿ ಹರೀಶ್ ಮತ್ತು ಚೈತ್ರಾ ಗೋವರ್ಧನ್ ಆಶಯ ಗೀತೆ ಹಾಡಿದರು. ಕೋಶಾಧಿಕಾರಿ ಮನೋಜ್ ಕಾಶಿಮಠ ವಂದಿಸಿದರು. ಹರೀಶ್ ಕೆ. ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಭವ್ಯ ರಾಜೇಶ್ ಸಹಕರಿಸಿದರು.







