- Advertisement -


- Advertisement -
ವಿಟ್ಲದ ಅಡ್ಡದಬೀದಿಯಲ್ಲಿರುವ ಸಲೂನ್ ಹಾಗೂ ಎಂಪೈರ್ ಮಾಲ್ ನಲ್ಲಿರುವ ಸಲೂನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ನಮ್ಮ ಸಲೂನ್ ನಲ್ಲಿ ಈತನಕ ಯಾವುದೇ ಕೋವಿಡ್ ಪಾಸಿಟಿವ್ ಕೇಸ್ ಬಂದಿಲ್ಲ. ನಾವು ಸಲೂನಲ್ಲಿ ಎಲ್ಲಾ ಸುರಕ್ಷತಾ ಕ್ರಮವನ್ನು ಅನುಸರಿಸುತ್ತಿದ್ದೇವೆ.


ಪ್ರತಿಯೊಬ್ಬ ಗ್ರಾಹಕರಿಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್, ಕುಳಿತುಕೊಳ್ಳುವ ಚೆಯರ್’ಗೆ ಸ್ಯಾನಿಟೈಸಿಂಗ್, ಯೂಸ್&ತ್ರೋ ಬಟ್ಟೆ ಕವರ್, ಕುದಿಯುವ ನೀರಲ್ಲಿ ಕತ್ತರಿ, ಮೆಶಿನ್, ಬಾಚಣಿಗೆಗಳನ್ನು ತೊಳೆಯುವುದು ಇನ್ನಿತರ ಸುರಕ್ಷಾ ಕ್ರಮಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದೇವೆ. ಗ್ರಾಹಕರ ಸುರಕ್ಷೆಯೇ ನಮ್ಮ ದ್ಯೇಯವಾಗಿದೆ. ಹೀಗಿದ್ದೂ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿರುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸುತ್ತೇವೆ ಎಂದು ಸಲೂನ್ ಮಾಲಕರು ಸ್ಪಷ್ಟನೆ ಕೊಟ್ಟಿದ್ದಾರೆ.



- Advertisement -