Saturday, April 20, 2024
spot_imgspot_img
spot_imgspot_img

ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ಎಸ್ ಡಿ ಪಿ ಐ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ಎಸ್ ಡಿ ಪಿ ಐ ವಿಟ್ಲ ವಲಯ ವತಿಯಿಂದ ವಿಟ್ಲದ ನಾಡಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಎಸ್ ಡಿ ಪಿ ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು ಮಾತನಾಡಿ ಮೋದಿ ಸರ್ಕಾರ ದೇಶದ ಜನರನ್ನು ಹಿಂಸೆ ಮಾಡುತ್ತಿದೆ. ರೈತರ ಉತ್ಪನ್ನ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಸರ್ಕಾರ ಜಾರಿಗೊಳಿಸಿರುವ ಮಸೂದೆ ದೇಶ ವಿರೋಧಿ ಮಸೂದೆಯಾಗಿದೆ.

ಇಂತಹ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಭಾರೀ ತೊಂದರೆ ಇದೆ. ದೇಶದ ಸಂವಿದಾನ ಉಳಿಸಲು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು. ದೇಶಾದ್ಯಾಂತ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ತಮಗೆ ಏನು ಅರಿಯದಂತೆ ವರ್ತಿಸುತ್ತಿದೆ. ತಕ್ಷಣವೇ ರೈತರ ಬೇಡಿಗೆ ಸ್ಪಂದಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ ಮಾತನಾಡಿ ಸರ್ಕಾರ ದೇಶದ ಬೆನ್ನೆಲುಬು ರೈತರಿಗೆ ಪ್ರಯೋಜಕಾರಿ ಯೋಜನೆಗಳನ್ನು ನೀಡುವ ಬದಲು ಅವರ ಬದಕನ್ನು ಕತ್ತಲೆ ಮಾಡುವ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಎಸ್ ಡಿ ಪಿ ಐ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು, ವಲಯಾಧ್ಯಕ್ಷ ರಹೀಂ ವಿಟ್ಲ,ವಲಯ ಕೋಶಾಧಿಕಾರಿ ಸಿದ್ದಿಕ್ ಉರಿಮಜಲು ಸಮಿತಿ ಸದರಾದ ಸುಲೈಮಾನ್ ಯಾನೆ ಪುತ್ತು ಒಕ್ಕೆತ್ತೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

- Advertisement -

Related news

error: Content is protected !!