ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಯನ್ ಮಾತನಾಡಿ’ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2023-24 ನೇ ಸಾಲಿನ ವಾರ್ಷಿಕ ವರದಿ ಮಹಾಸಭೆಯು ಇದೇ ಸೆ. 15 ನೇ ಆದಿತ್ಯವಾರದಂದು ಬೆಳಗ್ಗೆ 11 ಗಂಟೆಗೆ ವಿಠಲ ಪದವಿಪೂರ್ವ ಕಾಲೇಜಿನ ’ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ. ಸಭೆಯಲ್ಲಿ 2023-24 ನೇ ಸಾಲಿನ ವರದಿ ವಾಚನ, ಕಳೆದ ವರ್ಷದ ಮಹಾಸಭೆಯ ನಡವಿಳಿಕೆಗಳನ್ನು ತಿಳಿಸುವುದು, 2023-24 ನೇ ಸಾಲಿನ ಜಮಾ-ಖರ್ಚು ವ್ಯಾಪಾರ ಲಾಭ ನಷ್ಟ ಮತ್ತು ಆಸ್ತಿ ಜವಬ್ದಾರಿ ತಕ್ತೆಗಳ ಮಂಜೂರಾತಿ, 2023-24 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಮಂಜೂರಾತಿ, 2023-24 ನೇ ಸಾಲಿನ ಅಂದಾಜು ಬಜೆಟ್‌ಗಿಂತ ಮಿಕ್ಕಿ ಆದ ಖರ್ಚಿನ ಮಂಜೂರಾತಿ, 2023-24 ನೇ ಸಾಲಿನ ವರ್ಷದ ಬಾಬ್ತು ತಯಾರಿಸಲಾದ ಅಂದಾಜು ಆಯ ವ್ಯಯ ಪಟ್ಟಿ ಮಂಜೂರಾತಿ 2023-24 ನೇ ಸಾಲಿನ ಲಾಂಭಾಂಶ ವಿಂಗಡಣೆ , ಸಂಯೋಜಿತ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆರಿಸುವುದು, 2023-24 ನೇ ಸಾಲಿನ ಲೆಕ್ಕ ಪರಿಶೋಧಕರ ಆಯ್ಕೆ, ಮುಂತಾದ ವಿಚಾರಗಳ ಬಗ್ಗೆ ಸಭೆ ನಡೆಯಲಿದೆ. ಅದಲ್ಲದೆ, ಸಂಘವು 2023-24 ನೇ ಸಾಲಿನಲ್ಲಿ ರೂ. 204.92 ಕೋಟಿ ವ್ಯವಹಾರ ಮಾಡಿ ಎಲ್ಲಾ ಖರ್ಚುಗಳನ್ನು ಕಳೆದು ರೂ. 1,07,00,765.55/- ರಷ್ಟು ಲಾಭ ಗಳಿಸಿದ್ದು, ವರದಿ ಸಾಲಿನಲ್ಲಿ ಸಂಘವನ್ನು ಎ ತರಗತಿಯಲ್ಲಿ ವರ್ಗೀಕರಿಸಲಾಗಿದೆ ಎಂದರು. ಈ ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರು, ಪದಾಧಿಕಾರಿಗಳು, ಭಾಗವಹಿಸಿ ಯಶಸ್ವಿಗೊಳಿಸಿಕೊಡುವಂತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರು ಮಹಾಬಲೇಶ್ವರ ಭಟ್ ಎ, ನಿರ್ದೇಶಕರುಗಳಾದ ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ ಸೇರಾಜೆ, ರಾಘವೇಂದ್ರ ಪೈ ಎ, ದಿನೇಶ್ ಕೆ, ವಾಸು ಸಿ ಹೆಚ್, ಶಿವಪ್ಪ ನಾಯ್ಕ, ಗೌರಿ ಎಸ್ ಎನ್ ಭಟ್, ಸಂಗೀತಾ ಯನ್, ಕವಿತಾ ಕೆ ಎಲ್, ಉಪಸ್ಥಿತರಿದ್ದರು.