Thursday, April 25, 2024
spot_imgspot_img
spot_imgspot_img

ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವತಿ ದೀಪ್ತಿ ಮಾರ್ಲ ಉಗ್ರ ಚಟುವಟಿಕೆಗೆ ಆರೋಪದಲ್ಲಿ ಬಂಧನ..! ತಕ್ಷಣ ಲವ್ ಜಿಹಾದ್ ತಡೆ ಕಾನೂನು ತನ್ನಿ – ಬಜರಂಗದಳ ಆಕ್ರೋಶ

- Advertisement -G L Acharya panikkar
- Advertisement -
vtv vitla
vtv vitla

IA ದಾಳಿ ಮಾಡುವ ಸಂಧರ್ಭದಲ್ಲಿ ಉಳ್ಳಾಲದ ಪತಿಷ್ಠಿತ ಮುಖಂಡರಾದ ದಿ. ಇದಿನಬ್ಬನವರ ಮೊಮ್ಮಗನನ್ನು ಭಯೋತ್ಪಾದನಾ ಚಟುವಟಿಕೆ ಆರೋಪದಲ್ಲಿ ಬಂಧಿಸಿದ್ದಾರೆ. ಈ ಸಂಧರ್ಭದಲ್ಲಿ ಹಿಂದೂ ಯುವತಿಯಾದ ಕೊಡಗು ಮೂಲದ ದೇರಳಕಟ್ಟೆ, ಖಾಸಗಿ ಕಾಲೇಜಿನಲ್ಲಿ ಫಿಸಿಯೋ ಥೆರಪಿಸ್ಟ್ ಕಲಿಯುತ್ತಿದ್ದ ದೀಪ್ತಿ ಮಾರ್ಲ ಇಸ್ಲಾಮಿಗೆ ಮತಾಂತರಗೊಂಡು ಮರಿಯಮ್ಮಳಾಗಿ ಇದ್ದಾಳೆ ಎಂಬುದಾಗಿ ಬಹಿರಂಗವಾಗಿದೆ. ದಿ! ಇದಿನಬ್ಬನವರ ಮೊಮ್ಮಗ ಅನಾಸ್ ಅಬ್ದುಲ್ ರಹಮಾನ್ ಎಂಬುವವನು ಮದುವೆಯಾಗಿದ್ದು, ಇದೀಗ ಇವಳು ಸಿರಿಯಾ ಮೂಲದ ಭಯೋತ್ಪಾದಕರ ಜೊತೆ ಸಂಪರ್ಕವನ್ನು ಇಟ್ಟುಕೊಂಡಿದ್ದಾಳೆ ಎನ್ನುವ ಆರೋಪದ ಅಡಿಯಲ್ಲಿ ಇವಳನ್ನು NIA ತಂಡ ಜನವರಿ 3 2022 ರಂದು ಬಂಧಿಸಿದೆ.

ಹಾಗಾಗಿ ಇದೊಂದು ವ್ಯವಸ್ಥಿತವಾದ ಜಾಲವಾಗಿದ್ದು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಇಸ್ಲಾಮಿಗೆ ಮತಾಂತರಿಸಿ ಮದುವೆಯಾಗಿ ದೇಶ ವಿರೋಧಿ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಹೆಣ್ಣುಮಕ್ಕಳನ್ನು ಇಸ್ಲಾಂ ಮತಾಂತರ ಮಾಡುವಂತಹ ವ್ಯವಸ್ಮಿತ ತಂಡ ಕಾರ್ಯಾಚರಿಸುತ್ತಿದ್ದು, ಇದೊಂದು ಯೋಜಿತ ಸಂಚು ಆಗಿದ್ದು ಇವರಿಗೆ ದೇಶ ವಿದೇಶಗಳಿಂದ ಹಣಕಾಸಿನ ನೆರವು ಬರುತ್ತಿದ್ದು ಮೂಲಭೂತವಾದಿ – ಇಸ್ಲಾಮಿಕ್ ಸಂಘಟನೆಯ ಕೈವಾಡವಿದ್ದು, ಈ ಹಿನ್ನೆಲೆಯಲ್ಲಿ ಇನ್ನಷ್ಟು ಉಗ್ರರು ಈ ಭಾಗದಲ್ಲಿ ನೆಲೆಸಿರುವ ಶಂಕೆ ಇದು ಇನ್ನಷ್ಟು ತನಿಖೆ ನಡೆಸಿ ಈ ಉಗ್ರರ ಜಾಲವನ್ನು ಬಂಧಿಸಲು ಆಗ್ರಹಿಸಿದೆ.

ಅಲ್ಲದೆ ಪಾಟ್ನಾ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಹಣಕಾಸು ನೆರವು ನೀಡಿದರು ಎಂಬ ಆರೋಪದಲ್ಲಿ 2013ರ ನ.11ರಂದು ಮಂಗಳೂರು ಸಮೀಪದ ಪಂಜಿಮೊಗರು ನಿವಾಸಿ ಆಯಷಾ ಬಾನು ಹಾಗೂ ಆಕೆಯ ಪತಿ ಜುಬೇರ್ ಹುಸೇನ್ನನ್ನು ಬಂಧಿಸಿದ್ದಾರೆ, ಹಿಂದೂ ಯುವತಿ ಆಶಾ ಲವ್ ಜಿಹಾದಿಗೆ ಬಲಿಯಾಗಿ ಉಗ್ರರ ಚಟುವಟಿಕೆಗೆ ತೊಡಗಿಸಿಕೊಂಡಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ ಹಾಗಾಗಿ ತಕ್ಷಣ ಕರ್ನಾಟಕದಲ್ಲಿ ಆಧ್ಯಾದೇಶ ಹೊರಡಿಸಿ ಲವ್ ಜಿಹಾದ್ ತಡೆ ಕಾನೂನು ಶೀಘ್ರವಾಗಿ ತರಲು ಬಜರಂಗದಳ ಆಗ್ರಹಿಸುತ್ತದೆ.

vtv vitla

ಕರಾವಳಿಯಲ್ಲಿ ಉಗ್ರರ ಪ್ರಯೋಗ ಶಾಲೆ ತಕ್ಷಣ ಶಾಶ್ವತ | NIA ಕಚೇರಿಯನ್ನು ಮಂಗಳೂರಿನ ಉಳ್ಳಾಲದಲ್ಲಿ ಸ್ಥಾಪಿಸಲು ಮನವಿ – ಬಜರಂಗದಳ

008ರ ಅ.3, ಮುಂಬಯಿಯ ಪೊಲೀಸರ ನೆರವಿನೊಂದಿಗೆ ಮಂಗಳೂರಿನ ಪೊಲೀಸರು ಉಳ್ಳಾಲ ಹಾಗೂ ಇತರ ಮೂರು ಕಡೆ ಬೆಳ್ಳಂಬೆಳಗ್ಗೆ 3 ಗಂಟೆ ವೇಳೆಗೆ ದಾಳಿ ನಡೆಸಿ ದೇಶದ ಕುಖ್ಯಾತ ಉಗ್ರ ಸಂಘಟನೆಯಾಗಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರರ ನೆಲೆ ಪತ್ತೆ ಹಚ್ಚಿದರು. ಭಯೋತ್ಪಾದಕರೊಂದಿಗೆ ಸಂಪರ್ಕ ಬೆಳೆಸಿದ ಮತ್ತು ಇದಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಶಂಕಿತ ಉಗ್ರರಾದ ಹಳೆಯಂಗಡಿ ನಿವಾಸಿ ಅಹಮ್ಮದ್ ಬಾವ ಅಬೂಬಕರ್, ಪಾಂಡೇಶ್ವರ ಸುಭಾಶ್ ನಗರ ನಿವಾಸಿ ಮೊಹಮ್ಮದ್ ನೌಶಾದ್ ಹಾಗೂ ಇವರ ಸಹಚರರಾದ ಜಾವೆದ್, ಮೊಹಮ್ಮದ್ ಅಲಿ, ಫಕೀರ್ ಮತ್ತು ರಫೀಕ್ ಎಂಬವರನ್ನು ಬಂಧಿಸಲಾಗಿತ್ತು. ಪಾಟ್ನಾ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದರು ಎಂಬ ಆರೋಪದಲ್ಲಿ 2013ರ ನ.11ರಂದು ಮಂಗಳೂರು ಸಮೀಪದ ಪಂಜಿಮೊಗರು ನಿವಾಸಿ ಆಯೆಷಾ ಬಾನು ಹಾಗೂ ಆಕೆಯ ಪತಿ ಜುಬೇರ್ ಹುಸೇನ್‌ನನ್ನು ಮಂಗಳೂರು ಪೊಲೀಸರು ಬಂಧಿಸಿ ಬಿಹಾರದ ಲಕ್ಕಿ ಸರಾಯಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಈ ಪುಕರಣ ನಡೆದು ಎರಡು ವರ್ಷದ ಬಳಿಕ ಇದೀಗ ವಿಶ್ವದ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಕಾರಣಕ್ಕೆ ಬಜಪೆ ವರ್ಮುದೆಯ ನಜ್ರುಲ್ ಹುದಾ ಎಂಬಾತನನ್ನು ಎನ್‌ಐಎ ತಂಡ ಬಂಧಿಸಿದ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಮಂಗಳೂರಿನಂತಹ ನಗರವನ್ನು ಕೂಡಾ ಐಸಿಸ್ ಸಂಪರ್ಕಿಸಿದ ಕುಖ್ಯಾತಿಗೂ ಪಾತ್ರವಾಗಿದೆ. 2013ರ ಅಕ್ಟೋಬರ್‌ನಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ ಬಂಧನವಾದ ಬಳಿಕ ಮತ್ತೆ ಮಂಗಳೂರು ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸುದ್ದಿಯಾಯಿತು.

vtv vitla
vtv vitla
vtv vitla

ಅಂದು ಬಂಧಿತನಾದ ಯಾಸಿನ್ ಭಟ್ಕಳ್ ವಿಚಾರಣೆ ಸಂದರ್ಭ ನಾನು ಮಂಗಳೂರಿನ ಅತ್ತಾವರದ ಫ್ಲಾಟ್ ಒಂದರಲ್ಲಿ ತಂಗಿದ್ದು, ಅಲ್ಲಿಂದಲೇ ಹೈದರಾಬಾದ್ ಲುಂಬಿಣಿ ಗಾರ್ಡನ್‌ ಸ್ಫೋಟಕ್ಕೆ ಕಚ್ಚಾ, ಬಾಂಬ್‌ಗಳನ್ನು ತಯಾರಿಸಿ ಸಾಗಿಸಿದ ಎಂಬ ಸ್ಫೋಟಕ ಮಾಹಿತಿ ನೀಡಿದ. ಈತ ನೀಡಿದ್ದ ಮಾಹಿತಿ ಆಧಾರದಲ್ಲಿ ಅಂದು ತಂಡೋಪ ತಂಡವಾಗಿ ದೇಶದ ವಿವಿಧ ತನಿಖಾ ಸಂಸ್ಥೆಗಳು ಮಂಗಳೂರಿಗೆ ಆಗಮಿಸಿ ತನಿಖೆ ನಡೆಸಿದವು.

ಮಂಗಳೂರು ಬಂದರು ಪೊಲೀಸ್ ಠಾಣೆಗೆ ಪ್ರತಿಭಟನೆ ನೆಪದಲ್ಲಿ ಬೆಂಕಿ ಹಚ್ಚುವ ಪ್ರಯತ್ನ, ಪೊಲೀಸ್ ಗಣೇಶ್ ಕಾಮತರನ್ನು ಹತ್ಯೆ ಮಾಡುವ ಪ್ರಯತ್ನ ಅಲ್ಲದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ಹಲ್ಲೆ ನಡೆಸಿ ಹತ್ಯೆ ಮಾಡುವ ಪುಯತ್ನದ ಹಿಂದೆ ಕೂಡ ಉಗ ಸಂಘಟನೆಗಳ ಕೈವಾಡವಿರುವ ಸಂಶಯವಿದೆ.

ಇದೀಗ ಜನವರಿ 3 2022 ರಂದು ಉಳ್ಳಾಲದ ಮಾಜಿ ಶಾಸಕ ದಿ ಇದಿನಬ್ಬನವರ ಸೊಸೆ ಹಿಂದೂ ಯುವತಿ ದೀಪ್ತಿ ಮಾರ್ಲ ಮತಾಂತರಗೊಂಡು ಮರಿಯಂ ಆಗಿ ಉಗ್ರಚಟುವಟಿಕೆಯ ಆರೋಪದಲ್ಲಿ NIA ಬಂಧನ ಮಾಡಿದ್ದು ಮಂಗಳೂರಿನಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ಎನ್‌ಐಎ, ಎಟಿಎಸ್ ಸೇರಿದಂತೆ ದೇಶದ ನಾನಾ ತನಿಖಾ ಸಂಸ್ಥೆಗಳು ಮಂಗಳೂರಿಗೆ ಭೇಟಿ ನೀಡಿ ತನಿಖೆ ಕೈಗೊಂಡಿವೆ, ಕರಾವಳಿ ಉಗ್ರ ಚಟುವಟಿಕೆಗಳ ತಾಣವಾಗುತ್ತಿದ್ದು ತಕ್ಷಣ ಮಂಗಳೂರಿನಲ್ಲಿ ಶಾಶ್ವತ NIA ಕಚೇರಿ ಸ್ಥಾಪಿಸಲು ಮನವಿ ಮಾಡಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

suvarna gold
- Advertisement -

Related news

error: Content is protected !!