




ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಇದರ 52ನೇ ವರುಷದ ಶ್ರೀ ಮಹಾಗಣೇಶೋತ್ಸವವು ಸೆ.19 ರಿಂದ ಸೆ.21ರವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.
ದಿನಾಂಕ 19-09-2023ನೇ ಮಂಗಳವಾರ ಪೂರ್ವಹ್ನ ಘಂಟೆ 8.30ಕ್ಕೆ ಶ್ರೀ ಗಣಪತಿ ಹವನ, 9.30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಲಿದೆ. ಧ್ವಜಾರೋಹಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾ. ಸಂಘಚಾಲಕ ಸುಬ್ರಹ್ಮಣ್ಯ ಭಟ್ ಕೆದಿಲ ನೆರವೇರಿಸಲಿದ್ದಾರೆ. ಉರಿಮಜಲು ಲಕ್ಷ್ಮಣ ಗೌಡ (ಬಾಬು ಗೌಡ) ಉದ್ಘಾಟಿಸಲಿದ್ದಾರೆ.
ನೂಜಿಯಲ್ಲಿರುವ ಪುರೋಹಿತ ವೇ। ಮೂ। ಗೋಪಾಲಕೃಷ್ಣ ಭಟ್, ಮಿತ್ತೂರು ಮೂರ್ತಿ ಪ್ರತಿಷ್ಠೆ ಮಾಡಲಿದ್ದಾರೆ. ಪೂರ್ವಹ್ನ ಘಂಟೆ 11.00ಕ್ಕೆ ಪೂಜಾ ಸೇವೆ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಧರ್ಮನಗರ ಬಾಲಗೋಕುಲ ಮಕ್ಕಳಿಂದ ಭಜನೆ ನಡೆಯಲಿದೆ. ರಾತ್ರಿ ಘಂಟೆ 8.20ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಘಂಟೆ 8.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ.
ಸೆ.20ರಂದು ಬೆಳಿಗ್ಗೆ 10.00 ಗಂಟೆಗೆ ಗ್ರಾಮ ಸೀಮಿತ ಸಾರ್ವಜನಿಕ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಬಳಿಕ ಮಧ್ಯಾಹ್ನ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00 ಗಂಟೆಯಿಂದ ಭಜನೆ, ಸಾಮೂಹಿಕ ಕುಂಕುಮಾರ್ಚನೆ, ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 8.00ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣವನ್ನು ಮಾಡಲಿದ್ದಾರೆ. ಬಳಿಕ ಛದ್ಮವೇಷ ಸ್ಪರ್ಧೆ ನಡೆಯಲಿದೆ.
ದಿನಾಂಕ 21-09-2023ನೇ ಗುರುವಾರ ಪೂರ್ವಾಹ್ನ ಘಂಟೆ 9ಕ್ಕೆ ಪೂಜಾ ಸೇವೆ ಪ್ರಾರಂಭಗೊಳ್ಳಲಿದೆ. ಬಳಿಕ 40ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ, ಹೂಹಾರ ಸ್ಪರ್ಧೆ, ಅಪರಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 2ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉದ್ಯಮಿ ಸುಭಾಶ್ ನಾಯಕ್ ವಿಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ್‍ಯವಾಹ ಚೇತನ್ ಕಡೇಶಿವಾಲಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಪರಾಹ್ನ ಗಂಟೆ 3ಕ್ಕೆ ಮಹಾ ಮಂಗಳಾರತಿ, ದಿಗ್ವಿಜಯೋತ್ಸವ, ವಂದೇ ಮಾತರಂ, ಮೂರ್ತಿ ಜಲಸ್ಥಂಭನ, ವಿಶೇಷ ಆಕರ್ಷಣೆ ಆರ್.ಕೆ ಕುಣಿತ ಭಜನಾ ತಂಡ ವಿಟ್ಲ -ಕುಣಿತ ಭಜನೆ ನಡೆಯಲಿದೆ. ರಾತ್ರಿ 7.30ರಿಂದ ದೇವಿ ಸನ್ನಿಧಿಯಲ್ಲಿ ಭಜನೆ ನಡೆಯಲಿದೆ.
ರಾತ್ರಿ ಗಂಟೆ 8 ಕ್ಕೆ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ರಿ.ಪುತ್ತೂರು ನೃತ್ಯಗುರು ವಿದುಷಿ ಶ್ರೀಮತಿ ರೋಹಿಣಿ ಉದಯ್ ಇವರ ಶಿಷ್ಯೆಯರಿಂದ ನೃತ್ಯಪ್ರೇರಣಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.