Friday, May 17, 2024
spot_imgspot_img
spot_imgspot_img

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ’ವಿಟ್ಲಾಧೀಶ್ವರ’ ಶ್ರೀಷಿಕೆಯ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ : ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೆಯ ಸುಸಂದರ್ಭದಲ್ಲಿ ಡ್ರೀಮ್ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಶನಿವಾರ ಅಂದರೆ 20 ರಂದು ಬಿಡುಗಡೆ ಆಗಲಿರುವ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ವಿಟ್ಲಾಧೀಶ್ವರ ಎಂಬ ಶ್ರೀಷಿಕೆಯ ಭಕ್ತಿಗೀತೆಯ ಪೋಸ್ಟರ್ ನ್ನು ವಿಟ್ಲ ಅರಮನೆಯ ಬಂಗಾರ ಅರಸರು ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅರ್ಚಕರಾದ ಗುರುಪ್ರಸಾದ್ ಇವರು ದೇವರಿಗೆ ಪೂಜೆ ಸಲ್ಲಿಸಿ ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರಮುಖರಾದ ಕೃಷ್ಣಯ್ಯ ವಿಟ್ಲ ಅರಮನೆ, ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ಶ್ರೀಕಂಠ ವರ್ಮಾ, ಶ್ರೀ ದಾಮೋದರ, ಶ್ರೀ ಮಂಗೇಶ್ ಭಟ್, ಶ್ರೀ ರಾಧಾಕೃಷ್ಣ ಏರಂಬು, ಭಾಸ್ಕರ ಕಟ್ಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಭಕ್ತಿಗೀತೆಯನ್ನು ಲೋಕೇಶ್ ಎ.ಕೆ ನಿರ್ಮಿಸಿದ್ದು, ಚೇತನ್ ಕೆ.ವಿಟ್ಲ ರವರು ಸಾಹಿತ್ಯ ಬರೆದು ರಾಗ ಸಂಯೋಜಿಸಿ ನಿರ್ದೇಶನ ಮಾಡಿರುತ್ತಾರೆ. ಅಶ್ವಿನ್ ಪುತ್ತೂರು ಇವರ ಸಂಗೀತ ನೀಡಿದ್ದಾರೆ. ಮೋನಿಶ್ ವಿಟ್ಲ ಇವರ ಗಾಯನದಲ್ಲಿ ಮೂಡಿ ಬಂದಿರುವ ಈ ಭಕ್ತಿ ಗೀತೆಗೆ ಶ್ರೀಮತಿ ಕವಿತಾ ಸತೀಶ್, ಶ್ರೀಮತಿ ವೀಣಾ ಕೆ, ಶ್ರೀಮತಿ ರೇಷ್ಮಾ. ಟಿ ರವರ ಸಹಗಾಯನವಿದೆ. ಮಿಥುನ್ ರಾಜ್ ವಿದ್ಯಾಪುರ ಧ್ವನಿ ಮುದ್ರಣ ಹಾಗೂ ಶಮೀರ್ ಮುಡಿಪು ಮಾಸ್ಟರಿಂಗ್ ಮಾಡಿರುತ್ತಾರೆ. ಛಾಯಾಗ್ರಹಣ, ಸಂಕಲನ ಮನ್ವಿತ್ ಕುಂಡಡ್ಕ ಹಾಗೂ ಪ್ರಚಾರ ಕಲೆ ಚೇತನ್ ಆಚಾರ್ಯ ಪೆರಿಂಜೆ ಇವರದಾಗಿದ್ದು, ಸಹನಿರ್ದೇಶನದ ಜೊತೆಗೆ ಸಮಗ್ರ ನಿರ್ವಹಣೆಯನ್ನು ಅಚಲ್ ವಿಟ್ಲ ಮಾಡಿದ್ದಾರೆ.

- Advertisement -

Related news

error: Content is protected !!