Wednesday, April 23, 2025
spot_imgspot_img
spot_imgspot_img

ವಿಟ್ಲ: ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ರಮೇಶ್ ಗೌಡ ಮೈರಾ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮೈರಾ

- Advertisement -
- Advertisement -
vtv vitla

ವಿಟ್ಲ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ ವಾರ್ಷಿಕ ಸಭೆಯು ಬಳಗ ಅಧ್ಯಕ್ಷರಾದ ದಿನೇಶ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ನೂತನ ಅಧ್ಯಕ್ಷರಾಗಿ ರಮೇಶ್ ಗೌಡ ಮೈರಾ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮೈರಾ ಆಯ್ಕೆಯಾದರು. ಉಳಿದಂತೆ ಬಳಗದ ಸಂಚಾಲಕರಾಗಿ ಸುಧಾಕರ್ ಮೈರಾ, ಗೌರವ ಸಲಹೆಗಾರರಾಗಿ ಚಿನ್ನಾ ಮೈರಾ, ಗೌರವ ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಸಾಲ್ ಬಿತ್ತಿಲು, ಕಾರ್ಯಾಧ್ಯಕ್ಷರಾಗಿ ಮೋಹನ್ ಗೌಡ ಮೈರಾ, ಉಪಾಧ್ಯಕ್ಷರುಗಳಾಗಿ ವಿಶ್ವನಾಥ್ ಮೈರಾ, ಮತ್ತು ರಮೇಶ್ ಕುಲಾಲ್ ಮೈರಾ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಮರಿಯ ಹಿತ್ತಿಲು, ಕೋಶಾಧಿಕಾರಿಯಾಗಿ ಯತೀಶ್ ಮೈರಾ, ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಮೈರಾ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀನಾಥ್ ಮೈರಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚೇತನ್ ಗೌಡ ಮೈರಾ ಹಾಗೂ ರಂಜಿತ್ ಕುಲಾಲ್ ಬೆತ್ತಸರವ್, ಆಯ್ಕೆಯಾದರು.

ಈಗಾಗಲೇ ಬಳಗವು 23 ವರ್ಷವನ್ನು ಪೂರೈಸಿದ್ದು ಮುಂದಿನ 25ನೇ ವರ್ಷಾಚರಣೆಯ ನಿಮಿತ್ತ ಸದ್ರಿ ವರ್ಷದಿಂದಲೇ ಪೂರ್ಣ ತಯಾರಿ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ನೂತನ ಅಧ್ಯಕ್ಷರು ಸದಸ್ಯರಲ್ಲಿ ವಿನಂತಿಸಿದರು.

- Advertisement -

Related news

error: Content is protected !!