Friday, April 19, 2024
spot_imgspot_img
spot_imgspot_img

ವಿಟ್ಲ: ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ಇದರ ವಿಟ್ಲ ವಲಯ ಘಟಕ ಉದ್ಘಾಟನಾ ಸಮಾರಂಭ ಮತ್ತು ಹಿರಿಯ ರಂಗ ಕಲಾವಿದರಿಗೆ ಸನ್ಮಾನ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ಇದರ ವಿಟ್ಲ ವಲಯ ಘಟಕ ಉದ್ಘಾಟನಾ ಸಮಾರಂಭ ಮತ್ತು ಹಿರಿಯ ರಂಗ ಕಲಾವಿದರಿಗೆ ಸನ್ಮಾನ ಸಮಾರಂಭವು ಜ.18 ರಂದು ಸೋಮಾವಾರ ಸಂಜೆ 7.30 ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥ ಗದ್ದೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕುಕ್ಕಾಜೆ ಮಾಣಿಲದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಕಿಶೋರ್ ಡಿ. ಶೆಟ್ಟಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಲಕ್ಷ್ಮಣ್ ಕುಮಾರ್ ಮಲ್ಲೂರು ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು,
ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಮಂಜು ವಿಟ್ಲ ಹಿರಿಯ ರಂಗ ಕಲಾವಿದರು, ಪಿ. ಸುಬ್ರಾಯ ಪೈ ಉದ್ಯಮಿಗಳು ವಿಟ್ಲ ಇವರು ಆಗಮಿಸಲಿದ್ದಾರೆ.

ಗೌರವ ಉಪಸ್ಥಿತಿಯನ್ನು ಪ್ರದೀಪ್ ಆಳ್ವ ಕ್ಷೇಮನಿಧಿ ಪ್ರಧಾನ ಸಂಚಾಲಕರು ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು, ಮೋಹನ ಕೊಪ್ಪಳ ಕದ್ರಿ ಕೋಶಾಧಿಕಾರಿ ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು, ಶೋಭಾ ಶೆಟ್ಟಿ ಮಂಗಳೂರು ಜತೆ ಕಾರ್ಯದರ್ಶಿ ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು, ಮಧು ಬಂಗೇರ ಕಲ್ಲಡ್ಕ ಸಂಘಟನಾ ಕಾರ್ಯದರ್ಶಿ ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಡುವ ಗೌರವಾನ್ವಿತರು ರವಿದಾಸ ಆಳ್ವ ಕೆಲಿಂಜ ಹಿರಿಯ ರಂಗಕರ್ಮಿ, ಪ್ರೇಮನಂದ ಭಟ್ “ವಿಟ್ಲದ ಕಲಾರತ್ನ” ಹಿರಿಯ ರಂಗಕರ್ಮಿ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಟ್ಲದ ಹವ್ಯಾಸಿ ಕಲಾವಿದರಿಂದ, ಕೊಲ್ಯ ಶ್ರೀನಿವಾಸ ಶೆಟ್ಟಿ ವಿಟ್ಲ ಸಂಯೋಜಿಸಿರುವ, ವಾಸು ಕುಲಾಲ್ ಎರುಂಬು ನಿರ್ದೇಶನದ, ಕಲಾರಸಿಕ ಸುರೇಶ್ ಕುಲಾಲ್ ವಿರಚಿತ ತುಳು ಹಾಸ್ಯಮಯ ನಾಟಕ “ಏರ್ ಮಲ್ತಿನ ತಪ್ಪು….?” ನಡೆಯಲಿದೆ.

ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ತುಳು ನಾಟಕ ಕಲಾವಿದರ ಒಕ್ಕೂಟ ವಿಟ್ಲ ವಲಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!