Friday, May 17, 2024
spot_imgspot_img
spot_imgspot_img

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಅತ್ಯಂತ ಅಸಹನೀಯ ಸಾಮಾಜಿಕ ವ್ಯವಸ್ಥೆಯ ಕಾಲಘಟ್ಟದಲ್ಲಿ ಅವತಾರವೆತ್ತಿದ ನಾರಾಯಣ ಗುರುವರ್ಯರು ಸಾರ್ವಕಾಲಿಕ ಜಗತ್ ಚಿಂತಕ. ಶೋಷಿತರ, ಕೆಳವರ್ಗದವರ ಉದ್ಧಾರದೊಂದಿಗೆ ನಾರಾಯಣಗುರುಗಳ ಚಿಂತನೆ ಸಮಾಜದಲ್ಲಿ ನಿಜಾರ್ಥದಲ್ಲಿ ಅನುಷ್ಠಾನವಾಗುವ ಅವಶ್ಯಕತೆ ಇದೆ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಹೇಳಿದರು.

ಅವರು ಇಂದು ವಿಟ್ಲದಲ್ಲಿರುವ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯರಾದ  ಎಂ.ಎಸ್. ಮಹಮ್ಮದ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸುವುದು ಅಗತ್ಯ. ಸಮಾಜದಲ್ಲಿ‌ ನಾವೆಲ್ಲರು ಒಂದು ಎನ್ನುವ ಭಾವನೆ‌ ಬಂದಾಗ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ. ಕಾಂಗ್ರೆಸ್ ಪಕ್ಷದ ಮೂಲಕ ಅವರ ತತ್ವಗಳು ಅನುಷ್ಠಾಣಗೊಂಡಿದೆ. ಅವರ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸವಾಗಬೇಕು ಎಂದರು.

ವಕ್ತಾರ ರಮನಾಥ ವಿಟ್ಲ, ಅಳಿಕೆ ಗ್ರಾ.ಪಂ. ಸದಸ್ಯ ಪದ್ಮನಾಭ ಪೂಜಾರಿ ಸಣ್ಣಗುತ್ತು. ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಮಾಜಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯೆ ಸುನಿತಾ ಕೋಟ್ಯಾನ್, ವಿಟ್ಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಲಕ್ಷ್ಮಣ ಮಿತ್ತೂರು,  ಪುತ್ತೂರು ಯುವವಾಹಿನಿ ಮಾಜಿ ಅಧ್ಯಕ್ಷ ಕಿರಣ್ ಪ್ರಶಾಂತ್ ಕೋಡಿ, ಚೆನ್ನಪ್ಪ ಪೂಜಾರಿ ಕುಂಡಡ್ಕ ಪಾದೆ, ಇಸಾಕ್ ಮಿತ್ತೂರು, ಬ್ಲಾಕ್ ಸದಸ್ಯೆ ಪದ್ಮಾವತಿ ಪೆಲತ್ತಡಿ, ಸುನಿತಾ ಕುಂಡಡ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತ ವಿಷ್ಣುಗುಪ್ತ ಪುಣಚರವರು ಬ್ರಹ್ಮಶ್ರೀ  ನಾರಾಯಣ ಗುರು ಸ್ವಾಮಿಯ ಬಗ್ಗೆ ಮಾತನಾಡಿದರು. ಆಶಿಕಾ,ಚೆತನ್ಯ,ವೀಕ್ಷನ್ಯ ಪ್ರಾರ್ಥಿಸಿದರು.ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಎಸ್ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ ವಂದಿಸಿದರು.

- Advertisement -

Related news

error: Content is protected !!