Friday, October 11, 2024
spot_imgspot_img
spot_imgspot_img

ಚಂದಳಿಕೆ ಅತಿಕಾರಬೈಲು ಅಬೀರಿ ಯುವಕೇಸರಿ ವತಿಯಿಂದ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಧನಸಹಾಯ

- Advertisement -
- Advertisement -

ವಿಟ್ಲ: ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಬಡಕುಟುಂಬಕ್ಕೆ ಯುವಕೇಸರಿ ಅಬೀರಿ ಅತಿಕಾರಬೈಲು ಚಂದಳಿಕೆ ವತಿಯಿಂದ ಧನಸಹಾಯ ನೀಡಲಾಯಿತು.

ವಿಟ್ಲ ಸಮೀಪದ ಚಂದಳಿಕೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಗೀತಾ ಕಳುವಾಜೆ ಇವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಆರ್ಥಿಕ ಸಂಕಷ್ಟದಲ್ಲಿದ್ದು , ತೀರಾ ಬಡತನದಲ್ಲಿ ಬೆಳೆದ ಇವರು ದೈನಂದಿನ ಜೀವನಕೋಸ್ಕರ ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತಿದ್ದರು.ಪ್ರಸಕ್ತ ಅರೋಗ್ಯ ಸಮಸ್ಯೆಯಿಂದಾಗಿ ಹಲವಾರು ತಿಂಗಳುಗಳಿಂದ ಕೆಲಸಕ್ಕೆ ಹೋಗದೆ ಚಿಕಿತ್ಸೆ ಪಡೆಯುತ್ತಿದ್ದು , ಇವರ ಗಂಡ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಮನಗಂಡ ಯುವಕೇಸರಿ ಅಬೀರಿ ಅತಿಕಾರಬೈಲು ಚಂದಳಿಕೆ ಸಂಘಟನೆಯ ವತಿಯಿಂದ 10,000 ರೂಗಳನ್ನು ಇವರ ಮುಂದಿನ ಚಿಕಿತ್ಸೆಗಳಿಗಾಗಿ ನೀಡಲಾಯಿತು.

- Advertisement -

Related news

error: Content is protected !!