Friday, June 5, 2026
spot_imgspot_img
spot_imgspot_img

ವಿಟ್ಲ: ಬಂಟರ ಸಂಘ ಗ್ರಾಮ ಸಮಿತಿ ವತಿಯಿಂದ ಲೇಸ್‌ದ ಲೆಪ್ಪೋಲೆ ಆಟಿದ ವನಸ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬಂಟರ ಸಂಘ ಗ್ರಾಮ ಸಮಿತಿ ವಿಟ್ಲ ವತಿಯಿಂದ ಲೇಸ್‌ದ ಲೆಪ್ಪೋಲೆ ಆಟಿದ ವನಸ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು. 23ರಂದು ವಿಟ್ಲ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಬೆಳಗ್ಗೆ 9.00ಗಂಟೆಯಿಂದ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭಾಕರ್ ಶೆಟ್ಟಿ ದಂಬೆಕಾನ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಂಟರ ಗ್ರಾಮ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಎಂ. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ವಿಟ್ಲ ವಲಯ ವಲಯಾಧ್ಯಕ್ಷರಾದ ಚೆಲ್ಲಡ್ಕ ದಡ್ಡಂಗಡಿ ರಾಧಾಕೃಷ್ಣ ಶೆಟ್ಟಿ ನೇರವೇರಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಬಂಟರ ಸಂಘ ಬಂಟ್ವಾಳ ತಾಲೂಕು ಕೋಶಾಧಿಕಾರಿ Ln. ಲೋಕೇಶ್ ಶೆಟ್ಟಿ ಭಾಗವಹಿಸಿದ್ದರು. ವಿಟ್ಲ ಗ್ರಾಮ ಸಮಿತಿ ಗೌರವಾಧ್ಯಕ್ಷ ಕೆದಂಬಾಡಿ ತಿಮ್ಮಪ್ಪ ರೈ, ತಾಲೂಕು ಬಂಟರ ಸಂಘದ ನಿರ್ದೇಶಕರು ಮತ್ತು ಮಾತೃ ಸಂಘದ ನಿರ್ದೇಶಕ ಭಾಸ್ಕರ ಶೆಟ್ಟಿ, ವಿಟ್ಲ ಮಹಿಳಾ ವಲಯಾಧ್ಯಕ್ಷೆ ಲತಾ ಸಿ.ರೈ, ವಿಟ್ಲ ಗ್ರಾಮ ಸಮಿತಿ ಮಹಿಳಾ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಟ್ಲ ಗ್ರಾಮ ಸಮಿತಿ ಕಾರ್ಯದರ್ಶಿ ಸತ್ಯಶಂಕರ ಶೆಟ್ಟಿ ಪ್ರತಿಭಾ ಪುರಸ್ಕಾರ ನಿರೂಪಣೆ. ಕೋಶಾಧಿಕಾರಿ ಪುನೀತ್ ಪಕ್ಕಳ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಪಡಾರು ಕಾರ್‍ಯಕ್ರಮ ನಿರೂಪಿಸಿದರು. ಅಭಿಜ್ಞಾ, ಮನೋಜ್ಞ ಪ್ರಾರ್ಥನೆ ಹಾಡಿದರು. ಬಳಿಕ ಹಲವು ಸ್ಪರ್ಧೆಗಳು ನಡೆಯಿತು. ವಿಟ್ಲ ಗ್ರಾಮದ SSLC ಮತ್ತು PUCಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

- Advertisement -

Related news

error: Content is protected !!