Tuesday, September 28, 2021
spot_imgspot_img
spot_imgspot_img

ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ ಕಿರುಚಿತ್ರ ವಿಷಾಮೃತಕ್ಕೆ ಭಾರೀ ಮೆಚ್ಚುಗೆ

- Advertisement -
- Advertisement -

ವಿಟ್ಲ: ಸಾಮಾಜಿಕ ಕಳಕಳಿ, ವಿಭಿನ್ನ ಕಥಾಹಂದರ, ಕಲಾತ್ಮಕವಾಗಿ ಮೂಡಿಬಂದ ಅದ್ಭುತ ಸಿನೆಮಾ ವಿಷಾಮೃತ. ವಿಟ್ಲದ ಕಲಾವಿದರೆಲ್ಲಾ ಸೇರಿಕೊಂಡು ರೂಪಿಸಿದ ವಿಶೇಷ, ವಿನೂತನ ಕಥೆಯನ್ನು ಒಳಗೊಂಡ ಕಿರುಚಿತ್ರ ಯೂಟ್ಯೂಬ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶದಲ್ಲಿ ಕಿರುಚಿತ್ರ ಮೂಡಿ ಬಂದಿದೆ. ಇಂದಿನ ಪೀಳಿಗೆಯ ಯುವಕರನ್ನು ಡ್ರಗ್ಸ್ ಜಾಲ ಆವರಿಸಿದೆ. ಇದರಿಂದ ನಿರ್ಮಾಣವಾಗುವ ಸ್ಥಿತಿ ಗತಿಗಳನ್ನು ಅದ್ಭುತವಾಗಿ ಹೆಣೆಯಲಾಗಿದೆ.

ಆರ್. ಕೆ ಕ್ರಿಯೇಷನ್ ವಿಟ್ಲ ನಿರ್ಮಾಣ ಮೂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಥೆ – ಶಿವರಾಮ್ ಅಳಿಕೆ, ಚಿತ್ರಕಥೆ – ಕಾರ್ತಿಕ್ ಕುಮಾರ್, ಸಂಗೀತ ಮಿಥುನ್ ರಾಜ್ ವಿದ್ಯಾಪುರ, ಸಂಭಾಷಣೆ – ಸಾಹಿತ್ಯ ಅನಿಲ್ ವಡಗೇರಿ, ಛಾಯಾಗ್ರಹಣ ಹರೀಶ್ ಪುತ್ತೂರು, ಡಿ.ಐ ಮತ್ತು ಸಂಕಲನ – ಅಭಿಷೇಕ್ ರಾವ್, ಮೇಕಪ್- ಪ್ರಸಾದ್ ಕೊಯಿಲ ಇವರದ್ದಾಗಿದೆ.

ಈ ಚಿತ್ರತಂಡದಲ್ಲಿ ಯದು ವಿಟ್ಲ, ರಾಜೇಶ್ ವಿಟ್ಲ, ಸಂತೋಷ್ ಶೆಟ್ಟಿ ಪೆಲತಡ್ಕ, ರಾಮಣ್ಣ ಗೌಡ, ಆರ್.ಕೆ ಕನ್ಯಾನ, ಅಚಲ್ ವಿಟ್ಲ, ಶಿವರಾಮ್ ಅಳಿಕೆ ಸೇರಿದಂತೆ ಮತ್ತಿತ್ತರರು ಬಣ್ಣ ಹಚ್ಚಿದ್ದಾರೆ. ಕಿರುಚಿತ್ರವನ್ನು ನೋಡಿ ಪ್ರೋತ್ಸಾಹಿಸಿ..

- Advertisement -
- Advertisement -

MOST POPULAR

HOT NEWS

Related news

error: Content is protected !!