Sunday, June 14, 2026
spot_imgspot_img
spot_imgspot_img

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಆಯೋಜಿಸಿದ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

- Advertisement -
- Advertisement -

ವಿಟ್ಲ(ನ.15): ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ಆಯೋಜನೆ ಗೊಂಡ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

ವಿಟ್ಲ ಪಟ್ಟಣ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷರು, ಪುತ್ತೂರು ಗ್ರಾಮಾಂತರ ಮಂಡಲ ಭಾರತೀಯ ಜನತಾ ಪಾರ್ಟಿ ಉಪಾಧ್ಯಕ್ಷರು ಹಾಗೂ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರೂ ಆದ ಅರುಣ್ ವಿಟ್ಲ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು.

ಹಿರಿಯ ವಾಲಿಬಾಲ್ ಆಟಗಾರ ಹರೀಶ್ ವಿ.ಆರ್ ಇವರು ತೆಂಗಿನಕಾಯಿ ಒಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.ಒಟ್ಟು 18 ತಂಡಗಳ ಇದರಲ್ಲಿ ಭಾಗವಹಿಸಿದ್ದು ವಿಟ್ಲ ದಲ್ಲಿ ಹಲವಾರು ವರ್ಷಗಳ ನಂತರ ಪಂದ್ಯಾಟ ನಡೆಯಿತು.

- Advertisement -

Related news

error: Content is protected !!