Thursday, June 18, 2026
spot_imgspot_img
spot_imgspot_img

ವಿಟ್ಲ : (ಸೆ.15) ಶ್ರೀ ಭಗವತೀ ದೇವಸ್ಥಾನದಲ್ಲಿ ಸಿಂಹ ಮಾಸದ ಪೂಜೆಯ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಸೇವೆ

- Advertisement -
- Advertisement -

ವಿಟ್ಲ : ಶ್ರೀ ಭಗವತೀ ದೇವಸ್ಥಾನದಲ್ಲಿ ಸಿಂಹ ಮಾಸದ ಪೂಜೆ ನಡೆಯುತ್ತಿದ್ದು ಈ ಪ್ರಯುಕ್ತ ಸೆ.15 ರಂದು ಸಂಜೆ ಗಂಟೆ 5.30ರಿಂದ ಯಕ್ಷಗಾನ ತಾಳಮದ್ದಳೆ ಸೇವೆಯು ಮುದುಕುಂಜ ವಾಸುದೇವ ಪ್ರಭು ಮತ್ತು ಮಳಿ ಜಿ.ಶ್ಯಾಮ್ ಭಟ್ ಅವರುಗಳ ಸ್ಮರಣಾರ್ಥ ಕಲಾಭಿಮಾನಿಗಳ ಸಹಕಾರದೊಂದಿಗೆ ತಾಳಮದ್ದಳೆ ಪ್ರಸಂಗ ಸತ್ವಪರೀಕ್ಷೆ (ಕೃಷ್ಣಾರ್ಜುನ) ನಡೆಯಲಿದೆ.

ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಹೊಸಮೂಲೆ ಗಣೇಶ್ ಭಟ್, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ದಂಬೆ ಈಶ್ವರ ಶಾಸ್ತ್ರಿ, ನೇರೋಳು ಗಣಪತಿ ನಾಯಕ್, ಪ್ರಕಾಶ್ ವಿಟ್ಲ , ಅರ್ಥಧಾರಿಗಳಾಗಿ ಪಕಳಕುಂಜ ಶ್ಯಾಮ್ ಭಟ್, ಸರ್ಪಂಗಳ ಈಶ್ವರ ಭಟ್, ಶ್ರೀಧರ ಶೆಟ್ಟಿ ವನಭೋಜನ, ನಾರಾಯಣ ನೀರಕಟ್ಟೆ, ಸಚ್ಚಿದಾನಂದ ಪ್ರಭು ಅಜೇರು, ಪೊರ್ಲುಪಾಡಿ ಈಶ್ವರ ಭಟ್, ಎಲ್.ಎನ್ ಭಟ್ ಮಳಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!