Tuesday, July 21, 2026
spot_imgspot_img
spot_imgspot_img

60 ದಿನಗಳ ಗಡುವಿಗೆ ಮೊದಲೇ ಇರಾನ್ ಮೇಲಿನ ಯುದ್ಧ ಕೊನೆಗೊಂಡಿದೆ: ಟ್ರಂಪ್ ಆಡಳಿತ

- Advertisement -
- Advertisement -

ವಾಷಿಂಗ್ಟನ್: 60 ದಿನಗಳ ಗಡುವಿಗೆ ಮೊದಲೇ ಇರಾನ್ ಮೇಲಿನ ಯುದ್ಧವನ್ನು ಕೊನೆಗೊಳಿಸಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿರುವ ಬಗ್ಗೆ ವರದಿಯಾಗಿದೆ.ಎಪ್ರಿಲ್ ಆರಂಭದಲ್ಲಿ ಕದನ ವಿರಾಮ ಪ್ರಾರಂಭವಾಗಿರುವುದರಿಂದ ಇರಾನ್ ಮೇಲಿನ ಯುದ್ಧ ಈಗಾಗಲೇ ಕೊನೆಗೊಂಡಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.

ಆ ಮೂಲಕ ಮಿಲಿಟರಿ ಕಾರ್ಯಾಚರಣೆಗಾಗಿ ಅಮೆರಿಕ ಸಂಸತ್ತಿನ ಅನುಮೋದನೆ ಪಡೆಯುವ 60 ದಿನಗಳ ಗಡುವನ್ನು ತಪ್ಪಿಸಲು ಟ್ರಂಪ್‌ ಆಡಳಿತ ಮುಂದಾಗಿದೆ.ಗುರುವಾರ ಸೆನೆಟ್‌ನಲ್ಲಿ ಸಾಕ್ಷ್ಯ ನುಡಿಯುವಾಗ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಕದನ ವಿರಾಮ ಯುದ್ಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ ಎಂದು ಹೇಳಿದ್ದಾರೆ.1973ರ ಕಾಯ್ದೆಯ ಪ್ರಕಾರ 60 ದಿನಗಳಿಗೂ ಹೆಚ್ಚು ಕಾಲ ನಡೆಯುವ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕದ ಸಂಸತ್ತಿನಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಕದನ ವಿರಾಮ ಮುಂದುವರಿದರೂ ಇರಾನ್ ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ. ಮತ್ತೊಂದೆಡೆ ಇರಾನ್ ಬಂದರುಗಳಲ್ಲಿ ಅಮೆರಿಕದ ನೌಕಾಪಡೆಯು ದಿಗ್ಬಂಧವನ್ನು ಮುಂದುವರಿಸಿದೆ.

- Advertisement -

Related news

error: Content is protected !!