Tuesday, April 30, 2024
spot_imgspot_img
spot_imgspot_img

ವಿಟ್ಟ:(ಏ.14-23) ಶ್ರೀ ಅನ್ನಪೂರ್ಣೇಶ್ವರಿ ಕ್ರಿಯೇಶನ್ ಅರ್ಪಿಸುವ ಸರಕಾರಿ ಪ್ರೌಢಶಾಲೆ ವಿಟ್ಲ ಇದರ ಸಹಯೋಗದೊಂದಿಗೆ ರಂಗ ನಟನಾ ಶಿಬಿರ- 2024

- Advertisement -G L Acharya panikkar
- Advertisement -

ವಿಟ್ಟ: ಶ್ರೀ ಅನ್ನಪೂರ್ಣೇಶ್ವರಿ ಕ್ರಿಯೇಶನ್ ಅರ್ಪಿಸುವ ಸರಕಾರಿ ಪ್ರೌಢಶಾಲೆ ವಿಟ್ಲ ಇದರ ಸಹಯೋಗದೊಂದಿಗೆ ರಂಗ ನಟನಾ ಶಿಬಿರ- 2024 ವು ಏ.14 ರಿಂದ 23ರ ವರೆಗೆ ಬೆಳಗ್ಗೆ 9:00 ರಿಂದ ಸಂಜೆ 4:00 ತನಕ ಸರಕಾರಿ ಪ್ರೌಢಶಾಲೆ ವಿಟ್ಲ ಇಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಯದು ವಿಟ್ಲ , ಮೇಕಪ್ ಆರ್ಟಿಸ್ಟ್ ಪ್ರಸಾದ್ ಕೊಯಿಲ, ಕಲಾವಿದರು ರಂಗ ನಿರ್ದೆಶಕರು ರಂಗಾಯಣ ಮೈಸೂರು ಮಕ್ಕಳ ರಂಗ ನಿರ್ದೆಶಕರು ಚಂದ್ರಮೌಳಿ ಪಾಣಾಜೆ ಪ್ರಸಿದ್ಧ ಯಕ್ಷ ಗುರುಗಳು ಗಣೇಶ್ ಪಾಲೆಚ್ಟಾರ್‍ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಟೋಬಿ ಚಿತ್ರದ ಬಾಲ ಬಾಲ ನಟಿ ಸ್ನೀಗ್ದ ಆರ್‌.ಶೆಟ್ಟಿ ಡ್ರಾಮಾ ಜ್ಯೂನಿಯರ್ಸ್‌ ಸೀಸನ್‌ 5ರ ಸ್ಪರ್ಧಿ ರಿಷಿತ್ ರಾಜ್ ವಿಟ್ಲ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಏ.12 ಹೆಸರು ನೋಂದಾವಣಿಗೆ ಕೊನೆಯ ದಿನಾಂಕ. 6 ರಿಂದ 21 ವರ್ಷ ವಯೋಮಿತಿ ಇರಬೇಕು. ಪ್ರವೇಶ ಶುಲ್ಕ 650/-

ರಂಗ ಪರಿಚಯ, ಅಭಿನಯ, ರಂಗ ಗೀತೆ, ಮುಖವಾಡ ರಚನೆ, , ಕಾರ್ಯಕ್ರಮ ನಿರ್ವಹಣೆ , ಮುಖವರ್ಣಿಕೆ , ರಂಗ ಚಟುವಟಿಕೆ , ಯಕ್ಷಾಭಿನಯ, ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8310814115, 9110243743, 6361183939

- Advertisement -

Related news

error: Content is protected !!