Friday, October 23, 2026
spot_imgspot_img
spot_imgspot_img

ಏ.10 ರಿಂದ ಆರ್.ಕೆ ಕಲಾ ಸಂಸ್ಥೆಗಳು (ರಿ) ವಿಟ್ಲ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಹಬ್ಬ

- Advertisement -
- Advertisement -

ವಿಟ್ಲ: ರಾಜೇಶ್ ವಿಟ್ಲ ಸಾರಥ್ಯದ ಆರ್. ಕೆ ಕಲಾ ಸಂಸ್ಥೆಗಳು(ರಿ) ವಿಟ್ಲ ಇದರ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಹಬ್ಬ ಏಪ್ರಿಲ್‌ 10 ರಿಂದ 15 ದಿನಗಳ ಕಾಲ ವಿಟ್ಟ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಅನುವಂಶಿಕ ಮೊಕ್ತೇಸರರ ಸಹಕಾರದೊಂದಿಗೆ ನಡೆಯುವ ಈ ಚಿನ್ನರ ಹಬ್ಬ ನಾಡಿನ ಪ್ರಸಿದ್ಧ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ಕಲಾತ್ಮಕ ಶೈಕ್ಷಣಿಕ ಧಾರ್ಮಿಕ , ಹಾಗೂ ಚಿಂತನ ಮಂಥನಗಳು, ರಂಗ ತರಬೇತಿ ,ವ್ಯಕ್ತಿ ವಿಕಾಸನ, ಗ್ರಾಮೀಣ ಕ್ರೀಡೆಗಳು ಕ್ರಾಫ್ಟ್, ಬೇರೆ ಬೇರೆ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳು ಕಳೆದ ವರ್ಷ ಯಶಸ್ಸಿ ಕಂಡ ಮಕ್ಕಳ ಮಾರುಕಟ್ಟೆ ಮಾತೃಪೂಜೆ, ಗೋವು ಪೂಜೆ, ದೀಪಾವಳಿ ಗಂಗಾವತಿ ನಿತ್ಯ ಶ್ಲೋಕ ಪಠಣ, ಯೋಗ ಹೀಗೆ ಅನೇಕ ವಿಚಾರಗಳನ್ನು ಒಳಗೊಂಡ ಈ ಮಕ್ಕಳ ಮಾಯಲೋಕದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಹಾಗೂ ಮಕ್ಕಳ ಈ ಅಮೂಲ್ಯವಾದಂತ ಸಮಯವನ್ನು ಸದುಪಯೋಗವಾಗುವಂತೆ ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ನಿರ್ದೇಶಕ ರಾಜೇಶ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9448339207, 8073406749, 9980107897

- Advertisement -

Related news

error: Content is protected !!