


ವಿಟ್ಲ ಬಸವನಗುಡಿಯಲ್ಲಿರುವ ವಿಠಲ್ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಜೇಸಿ ಕುಟೀರ”ದ ಮಕ್ಕಳ ಪ್ರತಿಭಾ ಪ್ರದರ್ಶನ ಹಾಗೂ ಪೋಷಕರ ಸಭೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 67 ಪುಟಾಣಿಗಳು ವಿಭಿನ್ನ ಪ್ರತಿಭೆಗಳಾದ ಹಾಡು, ನೃತ್ಯ, ಸುಭಾಷಿತ ,ಅನಿಸಿಕೆ, ಅಭಿನಯ ಗೀತೆ ಪ್ರದರ್ಶಿಸಿದ್ದರು. ಶಿಶು ನಿರೂಪಣೆ, ಪೋಷಕರ ಹಾಗೂ ಪ್ರೇಕ್ಷಕರ ಮನ ಗೆದ್ದಿತು. ಪುಟಾಣಿಗಳಿಗೆ ಮನೆಯ ವಾತಾವರಣ ಕಲ್ಪಿಸಿ ಬಾಲ್ಯದಿಂದಲೇ ಸಂಸ್ಕಾರ ಶಿಕ್ಷಣವನ್ನು ಪರಿಚಯಿಸುತ್ತಿರುವ ಸಂಸ್ಥೆಯ ಬಗ್ಗೆ ಪೋಷಕರಿಂದ ಪ್ರಶಂಸನೀಯ ಮಾತುಗಳು ವ್ಯಕ್ತಗೊಂಡಿತು. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರೋತ್ಸಾಹಕರ ಬಹುಮಾನ ಹಾಗೂ ಫಲವಸ್ತುಗಳನ್ನು ನೀಡಿ ಪ್ರಶಂಶಿಸಲಾಯಿತು. ಪೋಷಕರ ಸಭೆಯಲ್ಲಿ ಭಾಗವಹಿಸಿದ ಹೆತ್ತವರು ಶಿಶು ಮಂದಿರದ ಸ್ವಚ್ಛತೆ ,ಆಹಾರದ ಹಾಗೂ ಶಿಕ್ಷಣ ವ್ಯವಸ್ಥೆ, ವಿಟ್ಲ ದಂತಹ ಗ್ರಾಮೀಣ ಪ್ರದೇಶದಲ್ಲಿರುವುದು ಬಹಳಷ್ಟು ಹೆತ್ತವರಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಪುಟ್ಟ ಕಂದಮ್ಮಗಳಿಗೆ ತಾಯಿಯ ಮಡಿಲೇ ಆಸರೆ ಮತ್ತು ರಕ್ಷಣೆ ಅಂತಹ ಮಡಿಲಾಗಿರುವ ಸಂಸ್ಥೆಯ ಶಿಶುಮಂದಿರದ ಶಿಕ್ಷಕ ಶಿಕ್ಷಕೇತರರನ್ನು ಪ್ರಶಂಸಿದರು . ನಿರ್ದೇಶಕಿ ಶ್ರೀಮತಿ ಸಿರಿ.ಯಲ್.ಎನ್ ಕುಡೂರು ಮಗುವಿನ ಹಾವ ಭಾವಗಳಿಗೆ ಚಿಗುರುವ ಮನಸ್ಸುಗಳ ಬಣ್ಣದ ಕನಸುಗಳಿಗೆ ರಕ್ಷಣೆ ನಮ್ಮ ಶಿಶುಮಂದಿರ ಎಂದು ಪ್ರಶಂಶಿಸಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ್ ಎ, ಹಿರಿಯ ನಿರ್ದೇಶಕ ಗೋಕುಲ್ ಶೇಟ್ ಹಾಗೂ ಹಸನ್ ವಿಟ್ಲ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ದಂಬೆಕಾನ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಂಶುಪಾಲ ಜಯರಾಮ್ ರೈ ಸ್ವಾಗತಿಸಿ, ಆಡಳಿತಾಧಿಕಾರಿ ರಾಧಾಕೃಷ್ಣ ಧನ್ಯವಾದಗೈದರು. ಕಾರ್ಯಕ್ರಮದ ಸಂಯೋಜನೆಯನ್ನು ಕುಟೀರದ ಶಿಕ್ಷಕಿ ಪವಿತ್ರ ನೆರವೇರಿಸಿದರು.