




ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮತ್ತು ಮಹಿಳಾ ಘಟಕ ಶಾಂತಿನಗರ ವಿಟ್ಲ ಇವರ ಸಹಕಾರದೊಂದಿಗೆ “ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ” ಡಿಸೆಂಬರ್ 7ನೇ ಆದಿತ್ಯವಾರ ಬೆಳಿಗ್ಗೆ 9:00 ರಿಂದ ಸರಕಾರಿ ಪ್ರೌಢಶಾಲೆ (RMSA) ವಿಟ್ಲ (ಮಾದರಿ ಶಾಲೆಯ ಮೇಲಿನ ಕ್ರೀಡಾಂಗಣ) ಇಲ್ಲಿ ನಡೆಯಲಿದೆ.

ಉದ್ಘಾಟನೆ ಬೆಳಿಗ್ಗೆ 09-00ಕ್ಕೆ ನಡೆಯಲಿದೆ. ಅಪರಾಹ್ನ ಗಂಟೆ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಗೌಡರ ಯಾನೆ ಒಕ್ಕಲಿಗರ ಸಂಘ ರಿ. ವಿಟ್ಲ ಬಂಟ್ವಾಳ ತಾಲೂಕು ಇದರ ಅದ್ಯಕ್ಷ ಸಿ.ಕೆ. ಕುಶಾಲಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ವಿಟ್ಲ ಪಟ್ಟಣ ಪಂಚಾಯತ್ ನ ಅಧ್ಯಕ್ಷರು ಕರುಣಾಕರ ಗೌಡ ನಾಯ್ತೊಟ್ಟು ಉಪಸ್ಥಿತರಿರುವರು ಹಾಗೂ ದಿನೇಶ್ ಗೌಡ ಮಾಡ್ತೇಲ್, ಅಧ್ಯಕ್ಷರು ಯುವ ವೇದಿಕೆ, ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ಗೌರವಾಧ್ಯಕ್ಷರು ಚಿದಾನಂದ ಗೌಡ ಪೆಲತ್ತಿಂಜ, ಬಂಟ್ವಾಳ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಅಮಿತಾಕೃಷ್ಣ ಕೆ.ಜಿ. ಗೌರವ ಉಪಸ್ಥಿತರಿರುವರು.
ಪಂದ್ಯಾಟಗಳು:
*ಪುರುಷರಿಗೆ
*ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಗುಂಡು ಎಸೆತ
*ಹಿರಿಯರಿಗೆ
*ಲಕ್ಕಿ ಗೇಮ್, ವೇಗದ ನಡಿಗೆ
(ಮಹಿಳೆ ಮತ್ತು ಪುರುಷರು 50 ವರ್ಷ ಮೇಲ್ಪಟ್ಟು)
*ಮಹಿಳೆಯರಿಗೆ
*ತ್ರೋಬಾಲ್, ಸಂಗೀತ ಕುರ್ಚಿ, ಲಕ್ಕಿ ಗೇಮ್, ಹಗ್ಗ-ಜಗ್ಗಾಟ
*ಬಾಲಕ-ಬಾಲಕಿಯರಿಗೆ (1-5ನೇ ತರಗತಿ ವರೆಗೆ)
*100 ಮೀ. ಓಟ, ಸಂಗೀತ ಕುರ್ಚಿ ಹಾಗೂ ಲಕ್ಕಿ ಗೇಮ್
*ಬಾಲಕ-ಬಾಲಕಿಯರಿಗೆ (6-10ನೇ ತರಗತಿವರೆಗೆ)
*100 ಮೀ. ಓಟ, ಸಂಗೀತ ಕುರ್ಚಿ, ಲಕ್ಕಿ ಗೇಮ್ ಹಾಗೂ ಕಬಡ್ಡಿ
(ಕಬಡ್ಡಿ 10ನೇ ತರಗತಿ ವರೆಗಿನ ಬಾಲಕರಿಗೆ ಮಾತ್ರ)
*ಚಿಣ್ಣರಿಗೆ (1-5 ವರ್ಷದ ಒಳಗಿನ ಮಕ್ಕಳಿಗೆ)
*ಲಕ್ಕಿ ಗೇಮ್, ಲಕ್ಕಿ ನೇಮ್










