Saturday, May 4, 2024
spot_imgspot_img
spot_imgspot_img

ವಿಟ್ಲ: SSLC ಮರುಮೌಲ್ಯ ಮಾಪನ – ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಗರಿಷ್ಠ ಅಂಕ 619ಕ್ಕೆ

- Advertisement -G L Acharya panikkar
- Advertisement -

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಕೃಷ್ಣ 2023ರ SSLC ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 5 ಅಂಕಗಳ ಸೇರ್ಪಡೆಯೊಂದಿಗೆ ಒಟ್ಟು ಅಂಕಗಳು 619ನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.


ತೇಜಸ್ವಿ ತೆಂಕಬೈಲ್ ಹಾಗೂ ಸಿಂಚನ. ಬಿ. ಸಿ ತಲಾ 3 ಅಂಕಗಳ ಸೇರ್ಪಡೆಯೊಂದಿಗೆ ಒಟ್ಟು 616 ಅಂಕಗಳನ್ನು ಪಡೆಯುತ್ತಾ ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ ಸಮರ್ ಖದೀಜಳಿಗೆ 14 ಅಂಕಗಳ ಸೇರ್ಪಡೆಯೊಂದಿಗೆ ಒಟ್ಟು 613 ಅಂಕಗಳನ್ನೂ, ತ್ವಿಷಾ ಭಂಡಾರಿ 1 ಅಂಕದ ಸೇರ್ಪಡೆಯೊಂದಿಗೆ 608 ಅಂಕಗಳು , ಅಪರ್ಣ. ಯಸ್ 6 ಅಂಕ ಪಡೆದು 603 ಅಂಕಗಳು ಮತ್ತು ಆತ್ಮಿಕಾ 5 ಅಂಕಗಳ ಸೇರ್ಪಡೆಯೊಂದಿಗೆ 589 ಅಂಕಗಳನ್ನು ಪಡೆದಿರುತ್ತಾರೆ.

ಹೆಚ್ಚುವರಿ ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು , ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.

- Advertisement -

Related news

error: Content is protected !!